google : 20ನೇ ವರ್ಷಕ್ಕೆ ಕಾಲಿಟ್ಟ ಇಂಟರ್​ನೆಟ್​ ದಿಗ್ಗಜ ‘ಗೂಗಲ್’..!​ 

ಈ ಕಾಲದಲ್ಲಿ ನಮ್ಮಗೆ ಏನಾದರೂ ತಿಳಿದಿಲ್ಲ ಎಂದ ತಕ್ಷಣ ಗೂಗಲ್​ನಲ್ಲಿ ಹುಡುಕಿ  ಮಾಹಿತಿ ಪಡೆಯುತ್ತೇವೆ, ಜನರು ಎಲ್ಲದಕ್ಕೂ ಗೂಗಲ್​ ಮೊರೆ ಹೋಗುತ್ತಾರೆ. ಅಂಥ ಗೂಗಲ್​ ಇಂದು 20ವರ್ಷಕ್ಕೆ ಕಾಲಿಟ್ಟಿದೆ.

ಹೌದು, ಇಂಟರ್​ನೆಟ್​ ದಿಗ್ಗಜ ಎನ್ನುವ ಗೂಗಲ್​ 1998, ಸೆಪ್ಟೆಂಬರ್​ರಲ್ಲಿ ಜನ್ಮ ತಾಳಿದ್ದು, ಇಂದಿಗೆ ಗೂಗಲ್​ಗೆ 20ವರ್ಷ ತುಂಬಿದೆ. ಗೂಗಲ್​ ಜನ್ಮತಾಳಲು ಸೆರ್ಗೆ  ಬ್ರಿನ್​ ಮತ್ತು ಲ್ಯಾರಿ ಪೇಜ್ ಕಾರಣ. ಕ್ಯಾಲಿಫೋರ್ನಿಯಾದ ಸ್ಟ್ಯಾನ್​ಫೋರ್ಡ್​ನಲ್ಲಿ ವಿಶ್ವವಿದ್ಯಾಲಯದಲ್ಲಿ ಪಿಎಚ್​ಡಿ ಅಧ್ಯಯನ ಮಾಡುತ್ತಿದ್ದಾಗ ಇಬ್ಬರು ಸೇರಿ ಗೂಗಲ್​ ಅನ್ನು ಸ್ಥಾಪಿಸಿದ್ರು.  ಕ್ಯಾಲಿಫೋರ್ನಿಯದಲ್ಲಿ 20ವರ್ಷದ ಹಿಂದೆ ಮೊನ್ಲೋ ಪಾರ್ಕನಲ್ಲಿ ಸ್ಥಾಪಿಸಲಾಗಿದ್ದು, ವಿಶ್ವಾದ್ಯಂತ ಗೂಗಲ್​ ಸೇವೆ ಹಬ್ಬಿದ್ದು, ಗೂಗಲ್​ ಸಂಸ್ಥೆಯ ಸಿಇಓ ಸುಂದರ್​ಪಿಚೈ, ರುತ್​ ಪೊರಾಟ್​ ಸಿಎಫ್​ಓ ಆಗಿದ್ದು, ಸಂಸ್ಥೆಯಲ್ಲಿ  85 ಸಾವಿರ ಜನರು ಕೆಲಸ ಮಾಡುತ್ತಿದ್ದಾರೆ.

google founder ಗೆ ಚಿತ್ರದ ಫಲಿತಾಂಶ

ಇಬ್ಬರು ವಿದ್ಯಾರ್ಥಿಗಳು ಸೇರಿ ಇಂಟರ್​ನಟ್​ ದಿಗ್ಗಜನನ್ನು ಹುಟ್ಟುಹಾಕಿದ್ದು,  ಆರಂಭದಲ್ಲಿ ಇದನ್ನು ‘ಸರ್ಚ್ ಎಂಜಿನ್ ಬ್ಯಾಕ್‍ರಬ್’ ಎಂದು ಕರೆಯುತ್ತಿದ್ದರು. ‘ಬ್ಯಾಕ್‌ರಬ್’ನ್ನು ಬಳಿಕ ಗೂಗಲ್ ಎಂದು ಮರುನಾಮಕರಣ ಮಾಡಲಾಯಿತು. ಸಂಖ್ಯೆ 1 ರ ಮುಂದಿನ 100 ಸೊನ್ನೆಗಳನ್ನು  ಇಟ್ಟು ಗಣಿತಶಾಸ್ತ್ರ ಅಭಿವ್ಯಕ್ತಿಸುವ ರೀತಿಯಲ್ಲಿ ಗೂಗಲ್ ಹೆಸರಿಡಲಾಗಿದ್ದು,  ಜಗತ್ತಿನ ಮಾಹಿತಿಯನ್ನು ಯಾವುದೇ ಮೂಲೆಯಲ್ಲಿನ ಮಾಹಿತಿಯನ್ನು ಪಡೆಯಲು ಉಪಯುಕ್ತವಾಗಲಿ ಎಂಬ ಉದ್ದೇಶದಿಂದ ಇದನ್ನು ರೂಪಿಸಿದ್ದು, ವಿಶ್ವದಾದ್ಯಂತ ಗೂಗಲ್​ನ ಉಪಯೋಗ ಪಡೆಯುತ್ತಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com