ಪತ್ರಕರ್ತೆ ಗೌರಿ ಲಂಕೇಶ್ ಗೆ  “ರಿಪೋರ್ಟರ್ ಕಿಲ್ಡ್ ಆನ್ ಡ್ಯೂಟಿ” ಗೌರವ..

ಅಕ್ಟೋಬರ್ 18 , 2018 ರಂದು  ಫ್ರಾನ್ಸ್ ನಲ್ಲಿ ಜರುಗಲಿರುವ ನಾರ್ಮ್ಯಾಂಡಿ  ಲ್ಯಾಂಡಿಂಗ್ಸ್ ಹದಿನೈದನೇ ವಾರ್ಷಿಕೋತ್ಸವದ ಅಂಗವಾಗಿ ಯುದ್ಧ  ವರದಿಗಾರರಿಗೆ ನೀಡುವ “ಬಾಯೆಕ್ಸ್ – ಕ್ಯಾಲ್ವಡೋಸ್ ಅವಾರ್ಡ್ಸ್” – ಸಂಧರ್ಭದಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಗೆ  “ರಿಪೋರ್ಟರ್ ಕಿಲ್ಡ್ ಆನ್ ಡ್ಯೂಟಿ ” ಪ್ರಶಸ್ತಿಯೊಂದಿಗೆ ಗೌರವಿಸಲಾಗುವುದು. ಈ  ಗೌರವವು ಎರಡನೇ ಮಹಾಯುದ್ಧದಲ್ಲಿ ಫ್ರಾನ್ಸಿನ ಮೊದಲ ವಿಮುಕ್ತಿಗೊಂಡ ನಗರವಾದ ಬಾಯೆಕ್ಸ್ನ ನಲ್ಲಿ ನೆಡೆಯಲಿದ್ದು  ಅತ್ಯಂತ ಅಪಾಯಕಾರಿ ಮತ್ತು ಕ್ಲಿಷ್ಟಕರ ಸನ್ನಿವೇಶಗಳಲ್ಲಿ ಯುದ್ಧ ವರದಿಗಳನ್ನು ಸಾರ್ವಜನಿಕರಿಗೆ ತಲುಪಿಸುವ ಯುದ್ಧ ವರದಿಗಾರರಿಗೆ ನೀಡುವಂತಹುದಾಗಿದೆ.

ಪ್ರಶಸ್ತಿ ಪ್ರದಾನ  ಸಂಧರ್ಭದಲ್ಲಿ ಆಹ್ವಾನಿತರು ಪತ್ರಕರ್ತೆ ಗೌರಿ ಲಂಕೇಶ್ ರವರ ಪತ್ರಿಕಾರಂಗದಲ್ಲಿನ ಹೋರಾಟ ಮತ್ತು ಸಾಧನೆಗಳ ಬಗ್ಗೆ ವಿಚಾರ ವಿನಿಮಯ ಮಾಡಿಕೊಳ್ಳುವರು, ಇದರೊಟ್ಟಿಗೆ ಪುಸ್ತಕ ಮೇಳ, ಮಾಧ್ಯಮ ವೇದಿಕೆ, ಚರ್ಚೆಗಳು  ಕೂಡ ಜರುಗಲಿವೆ.

ಪ್ರಶಸ್ತಿ ಪ್ರದಾನ ಸಂಧರ್ಭಕ್ಕೆ ಕವಿತಾ ಲಂಕೇಶ್ ರವರನ್ನು ಆಹ್ವಾನಿಸಲಾಗಿದ್ದು ಅವರು  ಗೌರಿಯವರಿಗೆ ವಯಕ್ತಿಕ ಗೌರವ ಸಲ್ಲಿಸಬಹುದಾಗಿದೆ ಮತ್ತು ಇದರೊಂದಿಗೆ ಕರ್ತವ್ಯದಲ್ಲಿ ಕೊಲ್ಲಲ್ಪಟ್ಟ ಪತ್ರಕರ್ತರ ಸ್ಮರಣಾರ್ಥವಾಗಿ ನಿರ್ಮಿಸಿರುವ ಸ್ಮಾರಕವನ್ನು ಗೌರಿ ಲಂಕೇಶ್ ರವರ ಹೆಸರಿನೊಂದಿಗೆ ಅನಾವರಣಗೊಳಿಸಲಾಗುವುದು.

Leave a Reply

Your email address will not be published.

Social Media Auto Publish Powered By : XYZScripts.com