ಚುನಾವಣೆ ನಂತರದ ಹೊಂದಾಣಿಕೆ ಪ್ರಜಾಪ್ರಭುತ್ವಕ್ಕೆ ಅಪಮಾನ, ಜನರಿಗೆ ಮಾಡುವ ದ್ರೋಹ : ಸಿ.ಟಿ ರವಿ

ಚಿಕ್ಕಮಗಳೂರು : ಚಿಕ್ಕಮಗಳೂರಲ್ಲಿ ಶಾಸಕ ಸಿ.ಟಿ. ರವಿ ಹೇಳಿಕೆ ನೀಡಿದ್ದಾರೆ. ‘ ನಮಗೆ ಸರ್ಕಾರ ಉರುಳಿಸುವ ಬಗ್ಗೆ ಆಸಕ್ತಿಯಿಲ್ಲ. ಆದರೆ‌ ಇದು ಜನ ಬೆಂಬಲವಿಲ್ಲದ ಸರ್ಕಾರ, ಇದು ಯಾರಿಗೂ ಬೇಡವಾಗಿರುವ ಸರ್ಕಾರ, ಸರ್ಕಾರ ಉರುಳಿದರೆ ಅಳುವುದಕ್ಕೂ ಜನ ಇರಲ್ಲ. ಆದರೆ ಸರ್ಕಾರ ಉರುಳಿಸುವ ಉದ್ದೇಶ ಬಿಜೆಪಿಗಿಲ್ಲ, ಸರ್ಕಾರ ಉರುಳಿಸಿ ಅಧಿಕಾರ ಹಿಡಿಯುದಿಲ್ಲ, ಅದಾಗೇ ಬಿದ್ದರೆ ನಮ್ಮ ಕೈಯಲ್ಲಿಲ್ಲ ‘ ಎಂದಿದ್ದಾರೆ.

ಸ್ಥಳೀಯ ಸಂಸ್ಥೆಗಳಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಮೈತ್ರಿ ಹೇಳಿಕೆ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ ಸಿ.ಟಿ ರವಿ ‘ ದೇವೇಗೌಡರು ಮಾಜಿ ಪ್ರಧಾನಿಗಳು, ಹಿರಿಯರು, ಮುತ್ಸದ್ದಿ, ಅವರು ತಮ್ಮ ಇಳಿವಯಸ್ಸಿನಲ್ಲಿಯೂ ಬಿಜೆಪಿಯನ್ನ ಹೊರಗಿಟ್ಟು ಮೈತ್ರಿ ಮಾಡಿಕೊಳ್ಳುತ್ತೇವೆ ಎಂದಿದ್ದಾರೆ. ಈ ಹೇಳಿಕೆಯೇ ಪ್ರಜಾಪ್ರಭುತ್ವಕ್ಕೆ ಮಾಡುವ ಅಪಮಾನ. ಬೇಕಿದ್ದರೆ ಇವರು ಚುನಾವಣಾ ಪೂರ್ವ ಹೊಂದಾಣಿಕೆ ಮಾಡಿಕೊಳ್ಳಲಿ, ಈಗ ನಾವಿಬ್ವರೂ ಒಂದಾಗೋಣ ಎನ್ನುವುದು ಜನರಿಗೆ ಮಾಡುವ ದ್ರೋಹ ‘ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com