2007 ಹೈದರಾಬಾದ್ ಸ್ಫೋಟ : ಇಂಡಿಯನ್ ಮುಜಾಹಿದೀನ್‍ನ ಇಬ್ಬರು ತಪ್ಪಿತಸ್ಥರು – ಕೋರ್ಟ್ ತೀರ್ಪು

2017 ರ ಹೈದರಾಬಾದ್ ನಲ್ಲಿ ಸಂಭವಿಸಿದ ಅವಳಿ ಸ್ಫೋಟ ಪ್ರಕರಣಕ್ಕೆ ಸಂಭಂಧಿಸಿದಂತೆ ಇಂಡಿಯನ್ ಮುಜಾಹಿದೀನ್ ಸಂಘಟನೆಯ ಇಬ್ಬರು ತಪ್ಪಿತಸ್ಥರು ಎಂದು ವಿಶೇಷ ಕೋರ್ಟ್ ಮಂಗಳವಾರ ತೀರ್ಪು ನೀಡಿದೆ. ಇಂಡಿಯನ್ ಮುಜಾಹಿದೀನ್ ಗೆ ಸೇರಿದ ಅನೀಕ್ ಶಫೀಕ್ ಸಯೀದ್ ಹಾಗೂ ಅಕ್ಬರ್ ಇಸ್ಮಾಯಿಲ್ ಚೌಧರಿ ತಪ್ಪಿತಸ್ಥರು ಎಂದಿರುವ ನ್ಯಾಯಾಲಯ ಇನ್ನಿಬ್ಬರನ್ನು ಖುಲಾಸೆಗೊಳಿಸಿದೆ.

ಇನ್ನೂ ಒಬ್ಬ ಆರೋಪಿಯ ಬಗ್ಗೆ ತೀರ್ಪು ಬಾಕಿಯಿದ್ದು ಅದನ್ನು ಸೋಮವಾರಕ್ಕೆ ಮುಂದೂಡಲಾಗಿದ್ದು, ದೋಷಿಗಳಿಗೆ ವಿಧಿಸಲಾಗುವ ಶಿಕ್ಷೆಯ ಪ್ರಮಾಣವನ್ನೂ ಕೂಡ ಕೋರ್ಟ್ ಮುಂದಿನ ಸೋಮವಾರ ತಿಳಿಸಲಿದೆ.

11 ವರ್ಷಗಳ ಹಿಂದೆ 2007 ಆಗಸ್ಟ್ 25 ರಂದು ಹೈದರಬಾದಿನ ಗೋಕುಲ್ ಚಾಟ್ ಹಾಗೂ ಲುಂಬಿನಿ ಪಾರ್ಕ್ ಬಳಿ ಸಂಭವಿಸಿದ ಅವಳಿ ಬಾಂಬ್ ಸ್ಫೋಟಗಳಲ್ಲಿ 44 ಜನರು ಪ್ರಾಣ ಕಳೆದುಕೊಂಡು, 68 ಜನ ಗಾಯಗೊಂಡಿದ್ದರು.

 

Leave a Reply

Your email address will not be published.

Social Media Auto Publish Powered By : XYZScripts.com