‘ಮೋದಿಗೆ ಪ್ರಾಮಾಣಿಕತೆ, ಸತ್ಯತೆ ಬಗ್ಗೆ ಮಾತನಾಡುವ ಅರ್ಹತೆ ಇಲ್ಲ’ : ಚಂದ್ರಬಾಬು ನಾಯ್ಡು

ಆಂಧ್ರಪ್ರದೇಶ : ಪ್ರಧಾನಿ ನರೇಂದ್ರ  ಮೋದಿಗೆ ಪ್ರಾಮಾಣಿಕತೆ , ಸತ್ಯತೆ ಮತ್ತು ಶಿಸ್ತಿನ ಬಗ್ಗೆ ಮಾತನಾಡುವ ಯಾವುದೇ ಅರ್ಹತೆ ಇಲ್ಲ ಎಂದು ಆಂಧ್ರಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

‘ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಆಂಧ್ರ ಸಿಎಂ, ಮೋದಿ ಸರ್ಕಾರವು ನೋಟು ಅಮಾನ್ಯೀಕರಣವನ್ನು ಸರಿಯಾಗಿ ನಿರ್ವಹಿಸುವಲ್ಲಿ ವಿಫಲವಾಗಿದೆ. ನೋಟು ಅಮಾನ್ಯೀಕರಣದಿಂದ ಏನು ಸಾಧಿಸಿದೆ? ಇಂದು ಬ್ಯಾಂಕ್​ಗಳ ಸ್ಥಿತಿ ಹೇಗಿದೆ ಎಂಬುದನ್ನು ನಾವು ನೋಡುತ್ತಿದ್ದೇವೆ. ದೊಡ್ಡ ಮೌಲ್ಯದ ನೋಟುಗಳನ್ನು ರದ್ದುಗೊಳಿಸಬೇಕು. 2000 ರೂ. ನೋಟಿನ ಅಗತ್ಯತೆ ಯಾರಿಗಾದರೂ ಇದೆಯೇ?  ಇನ್ನು ಆರ್ಥಿಕ ಸ್ಥಿತಿ ಹೀಗೆಯೇ ಮುಂದುವರೆದರೆ ರೂಪಾಯಿ ಎದುರು ಡಾಲರ್​​ ಮೌಲ್ಯವು 100ಕ್ಕೆ ಏರಿಕೆಯಾಗಲಿದೆ. ಡಿಜಿಟಲ್​ ಕರೆನ್ಸಿ ಬಗ್ಗೆ ನನಗೆ ಯಾವುದೇ ತೊಂದರೆಯಿಲ್ಲ, ಆದರೆ ಡಿಜಿಟಲ್​ ಕರೆನ್ಸಿ ಹಾಗೂ ಭೌತಿಕ ಕರೆನ್ಸಿ ನಡುವೆ ಸಮತೋಲನ ಹೊಂದುವ ಅಗತ್ಯತೆ ಇದೆ’ ಎಂದು ಪ್ರಶ್ನೆ ಮೇಲೆ  ಪ್ರಶ್ನಿ ಹಾಕಿದ್ರು.

chandrababu naidu and modhi ಗೆ ಚಿತ್ರದ ಫಲಿತಾಂಶ

‘ಪ್ರಧಾನಿ ಶಿಸ್ತುಬದ್ಧವಾಗಿಲ್ಲ, ಅದು ಅವರಿಂದ ಸಾಧ್ಯವೂ ಇಲ್ಲ. ಇಂದಿಗೂ ಕೂಡ ಎಟಿಎಂಗಳಲ್ಲಿ ಹಣದ ಕೊರತೆ ಇದೆ.  ಕೇಂದ್ರ ಸರ್ಕಾರವು ಶಿಸ್ತಬದ್ಧವಾಗಿದ್ದರೆ, ಭ್ರಷ್ಟಾಚಾರ ಯಾಕೆ ನಡೆಯುತ್ತಿದೆ? ಬ್ಯಾಂಕ್​​ಗಳು ಏಕೆ ದಿವಾಳಿಯಾಗುತ್ತಿವೆ? ಹೀಗಾಗಿ ಪ್ರಾಮಾಣಿಕತೆ, ಸತ್ಯತೆ ಮತ್ತು ಶಿಸ್ತು ಬಗ್ಗೆ ಮಾತನಾಡಲು ಪ್ರಧಾನಿಗೆ ಯಾವುದೇ ಅರ್ಹತೆ ಇಲ್ಲ’ ಎಂದು ನಾಯ್ಡು ಟೀಕಿಸಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com