ಯುರೋಪ್​ ಪ್ರವಾಸಕ್ಕೆ ಹೊರಟ ಸಿದ್ದರಾಮಯ್ಯ : ಶುಭಕೋರಲು ಆಗಮಿಸಿದ ಅಭಿಮಾನಿಗಳು..!

ಬೆಂಗಳೂರು : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ 10 ದಿನಗಳ ಯುರೋಪ ಪ್ರವಾಸಕ್ಕೆ ತೆರಳಿದ್ದಾರೆ. ಈ ಹಿನ್ನೆಲೆಯಲ್ಲಿ ಹಾಲಿ ಹಾಗೂ ಮಾಜಿ ಸಚಿವರು ಮತ್ತು ಅಭಿಮಾನಿಗಳು ಸಿದ್ದರಾಮಯ್ಯ ಅವರಿಗೆ ಹೂ ಗುಚ್ಚವನ್ನು ಕೊಟ್ಟು ಶುಭಕೋರಲು ಬಂದಿದ್ರು.

ಇನ್ನು ಸಿದ್ದರಾಮಯ್ಯ  ಜೊತೆಗೆ ಪುತ್ರ ಯತೀಂದ್ರ ವಿಧಾನ ಪರಿಷತ್ ಸದಸ್ಯ ಗೋವಿಂದರಾಜು ಸೇರಿದಂತೆ ಕುಟುಂಬದ ಸದಸ್ಯರು ಯುರೋಪ್ ರಾಷ್ಟ್ರಗಳ ಪ್ರವಾಸಕ್ಕೆ ತೆರಳಿದ್ದಾರೆ. ಸಿದ್ದರಾಮಯ್ಯ ವಿದೇಶಕ್ಕೆ ತೆರಳಿದ ಬೆನ್ನಲ್ಲೇ ರಾಜಕೀಯ ಚಟುವಟಿಕೆಗಳು ತೀವ್ರಗೊಳ್ಳಲಿದೆ ಎಂದು ನಿರೀಕ್ಷಿಸಲಾಗಿತ್ತು.ಈ ವೇಳೆ ಸಿದ್ದರಾಮಯ್ಯಗೆ ಶುಭಕೊರಲು ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಮತ್ತು ಆಪ್ತರು ಸಿದ್ದರಾಮಯ್ಯ ಮನೆಗೆ ಬಂದು ಶುಭಕೋರಿದ್ರು.

ಈ ವೇಳೆ ಮಾಜಿ ಸಚಿವ ಹೆಚ್ ಆಂಜನೇಯ ಮಾತನಾಡಿ, ‘ವಿದೇಶ ಪ್ರವಾಸ ಮಾಡಬೇಕು ಅನ್ನೋದು ಎಲ್ಲರ ಆಸೆಯಾಗಿದೆ. ಇಂದು ಸಿದ್ದರಾಮಯ್ಯ ಅವರಿಗೆ ಶುಭಕೋರೋದಕ್ಕೆ ಬಂದಿದ್ದೇವೆ. ಅವರು ಐದು ವರ್ಷಗಳ ಕಾಲ ಸುಭದ್ರ ಆಡಳಿತ ನೀಡಿದ್ದಾರೆ.  5 ವರ್ಷಗಳ ಕಾಲ ದಣಿವರಿಯದೇ ದುಡಿದ್ರು. ನಿರೀಕ್ಷಿತ ಫಲಿತಾಂಶ ಬರಲಿಲ್ಲ. ಆದ್ರೆ ಅವರು ಕುಂದಿರಲಿಲ್ಲ. ಈಗ ಅವರು ವಿದೇಶಕ್ಕೆ ಹೋಗ್ತಿದ್ದಾರೆ ಸುಗಮವಾಗಿ ಹೋಗಿಬರಲಿ’ ಎಂದು ಶುಭಹಾರೈಸಿದ್ರು.

 

Leave a Reply

Your email address will not be published.

Social Media Auto Publish Powered By : XYZScripts.com