‘ಕಾರ್ಯಕರ್ತರ ಶ್ರಮ, ಹಿಂದುತ್ವದ ಆಧಾರದ ಮೇಲೆ ಪಕ್ಷ ದಿಗ್ವಿಜಯ ಸಾಧಿಸಿದೆ’ : ಈಶ್ವರಪ್ಪ

ಶಿವಮೊಗ್ಗ : ‘ಕಾರ್ಯಕರ್ತರ ಶ್ರಮ ಹಾಗೂ ಹಿಂದುತ್ವದ ಆಧಾರದ ಮೇಲೆ ನಾವು ಗೆದ್ದಿದ್ದೇವೆ. ಪಾಲಿಕೆಯ ಮೊದಲ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ದೊರೆತಿದೆ’ ಎಂದು ಶಿವಮೊಗ್ಗದಲ್ಲಿ ಶಾಸಕ ಈಶ್ವರಪ್ಪ ಹೇಳಿಕೆ ನೀಡಿದ್ರು.
 ಶಿವಮೊಗ್ಗದಲ್ಲಿ ಮಾತನಾಡಿದ ಶಾಸಕ ಈಶ್ವರಪ್ಪ, ‘ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ದಿಗ್ವಿಜಯ ಸಾಧಿಸಿದೆ. ಕಾರ್ಯಕರ್ತರ ಶ್ರಮ ಹಾಗೂ ಹಿಂದುತ್ವದ ಆಧಾರದ ಮೇಲೆ ಗೆದ್ದಿಧ್ದೇವೆ, ಪಾಲಿಕೆಯ ಮೊದಲ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ದೊರೆತಿದೆ. ವಿಧಾನಸಭಾ ಚುನಾವಣೆಯಲ್ಲಿ ಒಂದು ಲಕ್ಷಕ್ಕೂ ಅಧಿಕ ಮತ ಪಡೆದು ನಾನು ಗೆಲುವು ಸಾಧಿಸಿದೆ. ವಿಧಾನಸಭಾ ಚುನಾವಣೆಯ ಗೆಲುವು ಇಲ್ಲಿ ಕೂಡ ಮುಂದುವರೆದಿದೆ. ಶಿವಮೊಗ್ಗನಗರದ ಅಭಿವೃದ್ಧಿ ಕಾರ್ಯಗಳಿಗೆ ಬಿಜೆಪಿ ಬದ್ದವಾಗಿರಲಿದೆ,  ಜನರು ಋಣ ತೀರಿಸುವ ನಿಟ್ಟಿನಲ್ಲಿ ಬಿಜೆಪಿ ಅಭ್ಯರ್ಥಿಗಳು ಕಾರ್ಯ ನಿರ್ವಹಿಸಲಿದ್ದಾರೆ. ಚುನಾವಣೆಯಲ್ಲಿ ಕಾಂಗ್ರೆಸ್ ನ ನಾಯಕರನ್ನ ಸೋಲಿಸಲಾಗಿದೆ, 35 ವಾರ್ಡ್ ಗಳು ನಮ್ಮದೆ, ನಾವು ಅದರ ಅಭಿವೃದ್ದಿಗಾಗಿ ಶ್ರಮಿಸುತ್ತೇವೆ’ ಎಂದು ಗೆಲುವಿನ ಖುಷಿಯಲ್ಲಿ ಈಶ್ವರಪ್ಪ ಹೇಳಿಕೆ ನೀಡಿದ್ರು.

Leave a Reply

Your email address will not be published.