‘ಹುಚ್ಚರ ಪಾರ್ಟಿಯಲ್ಲಿ ಹುಚ್ಚರೇ ಇರ್ತಾರೆ’ : ರಾಗಾ ವಿರುದ್ಧ ಯತ್ನಾಳ ವಿವಾದಾತ್ಮಕ ಹೇಳಿಕೆ..!

ಬಾಗಲಕೋಟೆ : ‘ರಾಹುಲ್ ಗಾಂಧಿ ಒಬ್ಬ ದೊಡ್ಡ ಹುಚ್ಚ’ ಎಂದು ಪರಿಷತ್​ ಚುನಾವಣಾ ವೇಳೆ ಯತ್ನಾಳ ಹೇಳಿದ್ದಾರೆ. ಎಂಎಲ್ ಸಿ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಷಣ ಮಾಡುವ ವೇಳೆ ಯತ್ನಾಳ ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಸಂಬಂಧಿತ ಚಿತ್ರ

ಬಾಗಲಕೋಟೆಯಲ್ಲಿ ನಡೆದ ಪರಿಷತ್ ಚುನಾವಣಾ ಪ್ರಚಾರದ ಸಭೆಯಲ್ಲಿ ಮಾತನಾಡಿದ ವಿಜಯಪುರ ಶಾಸಕ ಬಸವರಾಜ ಪಾಟೀಲ ಯತ್ನಾಳ, ‘ಎಐಸಿಸಿ ಅಧ್ಯಕ್ಷ  ರಾಹುಲ್ ಗಾಂಧಿನೇ ಒಬ್ಬ ದೊಡ್ಡ ಹುಚ್ಚ. ಹುಚ್ಚರ ಪಾರ್ಟಿಯಲ್ಲಿ ಹುಚ್ಚರೇ ಇರ್ತಾರೆ ಅಂತ ಹೇಳಿ ಕಿಡಿ‌ ಎಬ್ಬಿಸಿದ್ದಾರೆ. ದೇಶದಲ್ಲಿ ರಾಹುಲ್ ಗಾಂಧಿ ಪರಿಸ್ಥಿತಿ ಎಲ್ಲಿಗೆ ಬಂದಿದೆ ನೋಡಿ ಅಂತ ಲೇವಡಿ ಮಾಡುವುದರ ಜೊತೆಗೆ ರಾಹುಲ್ ಗಾಂಧಿ ಮಾನಸ ಸರೋವರಕ್ಕೆ ಹೊಂಟಾರ. ರಾಹುಲ್ ಗೆ ಒಮ್ಮಿಂದೊಮ್ಮಲೆ ಹಿಂದು ದೇವರ ಮೇಲೆ ಭಕ್ತಿ ಬಂದಿದೆ. ಇಷ್ಟು ದಿನ ಹಿಂದು ದೇವಸ್ಥಾನಗಳಿಗೆ ಕಾಂಗ್ರೆಸ್ಸಿಗರು ಹೋಗ್ತಿದ್ರಾ ? ಎಂದು ಪ್ರಶ್ನೆ ಮಾಡಿದ್ರು. ಇನ್ನು ಮೊದಲು ಬಿಜೆಪಿಯವರು ಹಿಂದು ದೇವಸ್ಥಾನಕ್ಕೆ ಹೋದ್ರೆ ಕೋಮುವಾದಿ ಅಂತ ಪಟ್ಟ ಕಟ್ತಿದ್ರು. ಈ ದೇಶದಲ್ಲಿ ಜಗತ್ತಿನ ಎಲ್ಲ ಶಿವನ ಮಂದಿರಕ್ಕೆ ಹೋಗಿದ್ದು ನರೇಂದ್ರ ಮೋದಿ ಮಾತ್ರ’ ಎಂದ್ರು.

Image result for rahul

ಸದಾ ವಿವಾದಾತ್ಮಕ ಹೇಳಿಕೆ ನೀಡುವುದರಲ್ಲಿ ನಿಸ್ಸೀಮರಾಗಿರೋ ಯತ್ನಾಳ ಮತ್ತೆ ನಾಲಿಗೆ ಹರಿ ಬಿಟ್ಟಿದ್ದು, ರಾಹುಲ್​ ಗಾಂಧೀ ವಿರುದ್ಧ ಕಿಡಿಕಾರಿದ್ದಾರೆ. ಇನ್ನು ರಾಹುಲ್ ಗಾಂಧಿನಾ ಈ ದೇಶದ ಪ್ರಧಾನಿ ಮಾಡ್ತೀರಾ ಅಂಥ ಪ್ರಶ್ನೆ ಮಾಡಿದ ಯತ್ನಾಳ, ‘ಆ ಪುಣ್ಯಾತ್ಮ ಏನು ಮಾಡ್ತಾನೋ, ಏನು ಮಾತಾಡ್ತಾನೋ..? ಅವನಿಗೆ ಗೊತ್ತಿಲ್ಲ ಲೋಕಸಭೆ ಅಧಿವೇಶನ ನಡೆದಾಗ ಭಾಷಣ ಮಾಡಿ, ಪ್ರಧಾನಿಯನ್ನು ಅಪ್ಪಿಕೊಳ್ತಾನೆ’ ಅಂತ ಏಕ ವಚನದಲ್ಲಿ ವಾಗ್ದಾಳಿ ನಡೆಸಿದರು. ಈ ದೇಶವನ್ನು ಅರವತ್ತು ವರ್ಷ ಲೂಟಿ ಮಾಡಿದ್ದಾರೆ ಇಂತವರನ್ನ ಪ್ರಧಾನಿ ಮಾಡ್ತೀರಾ? ಎಂದು ರಾಗಾ ವಿರುದ್ಧ ವಾಗ್ದಾಳಿ ನಡೆಸಿದ್ರು.

Leave a Reply

Your email address will not be published.

Social Media Auto Publish Powered By : XYZScripts.com