ಮಂಗಳೂರು : ಕೈ ಅಭ್ಯರ್ಥಿ ಉಸ್ಮಾನ್ ಕಲ್ಲಾಪು ಸೋಲಿಗೆ ಆಕ್ರೋಶ : ಕಿಡಿಗೇಡಿಗಳಿಂದ ಕಲ್ಲು ತೂರಾಟ

ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ ಇಂದು ಪ್ರಕಟಗೊಂಡಿದ್ದು, ಚುನಾವಣೆ ಮತ ಎಣಿಕೆ ಬೆನ್ನಲ್ಲೇ ಮಂಗಳೂರಿನ ಕಲ್ಲಾಪುವಿನಲ್ಲಿ ಕಿಡಿಗೇಡಿಗಳ ದಾಂಧಲೆ ನಡೆದಿದೆ. ಪಕ್ಷೇತರ ಅಭ್ಯರ್ಥಿ ಮುಷ್ತಾಕ್ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಉಸ್ಮಾನ್ ಕಲ್ಲಾಪು ಸೋಲಿನಿಂದ ಆಕ್ರೋಶಗೊಂಡಿರುವ ಕಿಡಿಗೇಡಿಗಳು, ಮಂಗಳೂರು ಹೊರವಲಯದ ಕಲ್ಲಾಪುವಿನಲ್ಲಿ ಅಂಗಡಿ ಮುಗ್ಗಟ್ಟುಗಳಿಗೆ‌ ಕಲ್ಲು ತೂರಿದ್ದಾರೆ.

ಗುಂಪನ್ನು ಚದುರಿಸಲು ಪೊಲೀಸರಿಂದ ಲಾಘು ಲಾಠಿ ಪ್ರಹಾರ ನಡೆಸಿದ್ದಾರೆ. ಸಚಿವ ಖಾದರ್ ಆಪ್ತ ಕಾಂಗ್ರೆಸ್ ಅಭ್ಯರ್ಥಿ ಉಸ್ಮಾನ್ ಕಲ್ಲಾಪು ಸೋಲಿಗೆ ಆಕ್ರೋಶಗೊಂಡು ದಾಂಧಲೆ ನಡೆಸಿದ್ದಾರೆ ಎನ್ನಲಾಗಿದೆ,

ಉಳ್ಳಾಲ ನಗರಸಭೆಯ 19ನೇ ಕಲ್ಲಾಪು ವಾರ್ಡ್ ಅಭ್ಯರ್ಥಿ ಉಸ್ಮಾನ್, ಪಕ್ಷೇತರ ಅಭ್ಯರ್ಥಿ ‌ಮುಷ್ತಾಕ್ ವಿರುದ್ಧ ಸೋತಿದ್ದಾರೆ.

Leave a Reply

Your email address will not be published.