ಕ್ಯಾನ್ಸರ್​ನಿಂದ ಬಳಲುತ್ತಿದ್ದರೂ ಕೇರಳ ಸಂತೃಸ್ತರಿಗೆ ಧನಸಹಾಯ ಮಾಡಿದ ಭಿಕ್ಷುಕ…!

ಅಹ್ಮದಾಬಾದ್​ : ಮಹಾಜಲಪ್ರಳಯದಿಂದ ಕೊಡಗು, ಕೇರಳ ಅಕ್ಷರಸಹ ಸಲುಗಿಹೋಗಿದೆ. ಕೇರಳ ಪುನರ್​ ನಿರ್ಮಾಣಕ್ಕೆ ಎಲ್ಲಾ ಕಡೆಯಿಂದಲ್ಲೂ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದಾರೆ. ಆದರೆ ಕೆಲವೊಬ್ಬರು ಮಾಡುವ ಸಹಾಸ ಕೇಳಿದಾಗ ಮೂಕ ವಿಸ್ಮಿತರಾಗುತ್ತೇವೆ. ಕ್ಯಾನ್ಸರ್​ನಿಂದ ಬಳಲುತ್ತಿದ್ದ ಒಬ್ಬ ಭಿಕ್ಷುಕ ಅಜ್ಜ ಕೇರಳ ಸಂತೃಸ್ತರಿಗೆ 5000 ಹಣವನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ.

kerala floods ಗೆ ಚಿತ್ರದ ಫಲಿತಾಂಶ

71 ವರ್ಷದ ಕಿಮ್ಜಿ ಪ್ರಜಾಪತಿ ಎಂಬ ಭಿಕ್ಷುಕ, ಮೂರು ತಿಂಗಳಿನಿಂದ ಕ್ಯಾನ್ಸರ್‌ ಚಿಕಿತ್ಸೆ ಪಡೆಯುತ್ತಿರುವ ಇವರು ಕೇರಳಗೆ ಸಹಾಯ ಮಾಡಿದ್ದಾರೆ. ಪ್ರಜಾಪತಿ ಊರುಗೋಲಿನ ಸಹಾಯದಿಂದ ಜಿಲ್ಲಾಧಿಕಾರಿ ಕಚೇರಿಗೆ ಬಂದು ತನ್ನ ಚಿಕಿತ್ಸೆಗೆ ಬಳಸಬೇಕಿದ್ದ ಹಣದಲ್ಲಿ ಐದು ಸಾವಿರ ರೂಪಾಯಿಯನ್ನು ನೀಡಿ ಮಾನವೀಯತೆಯ ಪ್ರತಿಬಿಂಬವಾಗಿದ್ದಾರೆ.

‘ನನಗೆ ಕೇರಳದ ಪರಿಸ್ಥಿತಿ ಕೇಳಿ ಮನಸ್ಸಿಗೆ ತುಂಬಾ ನೋವಾಯಿತು. ಅಗತ್ಯವಿರುವವರಿಗೆ ಕೊಡುವುದಕ್ಕಿಂತ ಮಿಗಿಲಾದ ಸಂತೋಷ ಮತ್ತೊಂದಿಲ್ಲ’ ಎಂದು ಹೇಳಿದ ಪ್ರಜಾಪತಿ ‘ಕೇರಳ ಸರಕಾರ ಬೇಗನೆ ಜನರಿಗೆ ಉತ್ತಮ ಜೀವನ ಕಲ್ಪಿಸುವಂತಾಗಲಿ ಎಂದು ಪ್ರಾರ್ಥಿಸುತ್ತೇನೆ’ ಎಂದು ಪ್ರಜಾಪತಿ ತಿಳಿಸಿದ್ರು.

ಸಿಮಾಂಧರ್ ಸ್ವಾಮಿ ಜೈನ ದೇವಾಲಯದ ಬಳಿ ಭಿಕ್ಷೆ ಬೇಡುವ ಪ್ರಜಾಪತಿ, ಗಳಿಸಿದ ಹಣದಲ್ಲಿ ಬಡ ಮಕ್ಕಳ ಶಿಕ್ಷಣಕ್ಕೆ ನೆರವಾಗುತ್ತಿದ್ದರು. ಹೆಣ್ಣು ಮಕ್ಕಳ ಕಲಿಕೆಯನ್ನು ಪ್ರೋತ್ಸಾಹಿಸಲು ಉತ್ತಮ ಸಾಧನೆ ತೋರಿದ ಮಕ್ಕಳಿಗೆ 10 ಜತೆ ಚಿನ್ನದ ಕಿವಿಯೋಲೆ ಉಡುಗೊರೆಯಾಗಿ ನೀಡಿ ಪ್ರೋತ್ಸಾಹಿಸುತ್ತಿದ್ರು. ಇವರ ಸಮಾಜ ಸೇವೆ ನೋಡಿ ರೋಟರಿ ಕ್ಲಬ್‌ ಆಫ್ ಇಂಡಿಯಾ ಪ್ರಜಾಪತಿಯವರಿಗೇ ‘ಲಿಟರಸಿ ಹೀರೋ ಅವಾರ್ಡ್’​ ನೀಡಿ ಗೌರವಿಸಿದೆ.

Leave a Reply

Your email address will not be published.

Social Media Auto Publish Powered By : XYZScripts.com