ಬೆಂಗಳೂರು ಡ್ರೀಮ್ ಯುನೈಟೆಡ್ : ಕರ್ನಾಟಕ ಫುಟ್ಬಾಲ್ ಹಿರಿಮೆಗೆ ಇನ್ನೊಂದು ಗರಿ

ಉನ್ನತ ದರ್ಜೆಯ ಫುಟ್ಬಾಲ್ ತರಬೇತಿ ಕೇಂದ್ರವಾದ ಬೆಂಗಳೂರು ಟ್ರೀಮ್ ಯುನೈಟೆಡ್ ನಲ್ಲಿ ತರಬೇತಿ ಪಡೆದಂತಹ ವೃತ್ತಿಪರರ ಫುಟ್ಬಾಲ್ ಆಟಗಾರರ ತಂಡ ಬೆಂಗಳೂರಿನಲ್ಲಿ ಪಾದಾರ್ಪಣೆಗೊಳ್ಳಲಿದೆ.

ಇಂದು ಬಗರದ ಓಕ್ನೇವ್ ಸೂಟ್ಸ್ ನಲ್ಲಿ ನಡೆದಂತಹ ಸರಳ ಸಮಾರಂಭದಲ್ಲಿ ಶುದ್ಧ ದೇಸೀಯ ಫುಟ್ಬಾಲ್ ತಂಡ ಬೆಂಗಳೂರು ಯುನೈಟೆಡ್ ಫುಟ್ಬಾಲ್ ಅಕಾಡೆಮಿ (ಬಿಡಿಯುಎಫ್ಎ) ತಂಡವನ್ನು ಉದ್ಘಾಟಿಸಲಾಯಿತು. ಈ ಸಂದರ್ಭದಲ್ಲಿ ಬೆಂಗಳೂರು ಡ್ರೀಮ್ ಯುನೈಟೆಡ್ ತಂಡದ ಜೆರ್ಸಿಯನ್ನು ಅನಾವರಣಗೊಳಿಸಲಾಯಿತು. ಬಿಡಿಯುಎಫ್ ಸಿಯ ಪದಾಧಿಕಾರಿಗಳು ಆಟಗಾರರು ಹಾಗೂ ಇತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಫುಟ್ಬಾಲ್ ಸಂಸ್ಖರತಿಗೆ ಹೊಸ ಆಯಾಮವನ್ನು ನೀಡುವ ಉದ್ದೇಶದಿಂದ ಉದ್ಘಾಟನೆಗೊಂಡ ಈ ತಂಡ ಬೆಂಗಳೂರಿನ ಆಸಕ್ತ ಫುಟ್ಬಾಲ್ ಪ್ರೇಮಿಗಳಿಗೆ ಸ್ಪರ್ಧಾತ್ಮಕ ಪಂದ್ಯಾವಳಿಗಳಲ್ಲಿ ಭಾಗವಹಿಸುವ ಅವಕಾಶವನ್ನು ಮಾಡಿಕೊಡುವ ಗುರಿಯನ್ನು ಹೊಂದಿದೆ.

ಡ್ರೀಮ್ ಯುನೈಟೆಡ್ ತಂಡದ ಸ್ಥಾಪಕರು ಹಾಗೂ ಭಾರತೀಯ ರಕ್ಷಣಾ ಸಚಿವಾಲಯದ ಫುಟ್ಬಾಲ್ ತಂಡ ಸಿಐಎಲ್ ತಂಡದ ಆಟಗಾರರಾಗಿ ಹಾಗೂ ಕೋಚ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿರುವ ಶರತ್ ಕಾಮತ್ ಹಾಗೂ ಹೊಸ ಆಟಗಾರರನ್ನುಹೊಂದಿರುವ ತಂಡ ಈ ಬಾರಿಯ ಸೂಪರ್ ಡಿವಿಷನ್ ಲೀಗ್ ನಲ್ಲಿ ತಮ್ಮ ಕಾಲ್ಚಳಕ ತೋರಲು ತಯಾರಾಗಿದ್ದಾರೆ.

ಕಳೆದೆರಡು ವರ್ಷಗಳಲ್ಲಿ ಬೆಂಗಳೂರಿನ ಯುವ ಪ್ರತಿಭೆಗಳನ್ನು ಸೀನಿಯರ್ ಹಂತದಲ್ಲಿ ಆಡಲು ತರಬೇತಿಗೊಳಿಸಿದ್ದೇವೆ. ಸತತ ಆಯ್ಕೆಗಳ ನಂತರ 16 ರಿಂದ 18 ವಯಸ್ಸಿನ ಪ್ರತಿಭಾವಂತ ಆಟಗಾರರಿಗೆ ವೃತ್ತಿಪರ ತರಬೇತಿ ನೀಡಲಾಗಿದೆ.

 

Leave a Reply

Your email address will not be published.

Social Media Auto Publish Powered By : XYZScripts.com