9 ನೇ ದಿನಕ್ಕೆ ಕಾಲಿಟ್ಟ ಪಟೇಲ್​​ ಉಪವಾಸ ಸತ್ಯಾಗ್ರಹ : ಆರೋಗ್ಯ ಕ್ಷೀಣಿಸುತ್ತಿದ್ದರೂ ಕ್ಯಾರೆ ಎನ್ನದ ಸರ್ಕಾರ..!

ಅಹ್ಮದಾಬಾದ್​ : ಹೋರಾಟಗಾರ ಹಾರ್ದಿಕ್​ ಪಾಟೇಲ್​ ಅವರ ನಿರತ ಉಪವಾಸ ಸತ್ಯಗ್ರಹ 9 ದಿನಕ್ಕೆ  ಕಾಲಿಟ್ಟಿದ್ದು. ಹಾರ್ದಿಕ್​    ಪಟೇಲ್​ ಆರೋಗ್ಯ ಕೂಡ ಕ್ಷೀಣಿಸುತ್ತಿದ್ದರು, ಸರ್ಕಾರದವರು ಕ್ಯಾರೆ ಎನ್ನು  ತಮ್ಮ ಎರಡು ಕಣ್ಣುಗಳನ್ನು ದಾನ ಮಾಡಿ ಎಂದು ತಿಳಿಸಿದ್ದಾರೆ.

ಪಟೀಲ್​ ಸಮುದಾಯದ ಮೀಸಲಾತಿ,  ಉದ್ಯೋಗ ಹಾಗೂ ಹಾಗೂ ಹಲವು ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಪಟೇಲ್​ ಮಾಡುತ್ತಿರುವ ಉಪವಾಸ ಸತ್ಯಗ್ರಹ 9 ದಿನಕ್ಕೆ ಕಾಲಿಟ್ಟಿದೆ. ಇನ್ನು ಪಟೇಲ್​ರ ಆರೋಗ್ಯ ತಪಾಸಣೆ ಮಾಡಿದ ಸರ್ಕಾರಿ ವೈದ್ಯರು, ದೇಹದ ಪ್ರಮುಖ ಅಂಗಾಂಗಳ ಸಾಮರ್ಥ್ಯ ಕುಸಿಯುತ್ತಿದೆ ಎಂದು ತಿಳಿಸಿದ್ರು. 

ಇದನ್ನು ಮನಗಂಡ ಹಾರ್ದಿಕ್​, ನಮ್ಮ ಹೋರಾಟ ಬಿಜೆಪಿ ವಿರುದ್ಧ, ನಾನು ಸತ್ತರೆ ನನ್ನ ಕಣ್ಣುಗಳನ್ನು ದಾನ ಮಾಡಿ, ನನ್ನ ಬ್ಯಾಂಕ್ ಖಾತೆಯಲ್ಲಿ 50 ಸಾವಿರ ರೂಗಳಿದ್ದು, ಈ ಪೈಕಿ 30 ಸಾವಿರ ರೂಗಳನ್ನು ನನ್ನ ಕುಟುಂಬಕ್ಕೆ ನೀಡಿ. ಉಳಿದ 20 ಸಾವಿರ ರೂಗಳನ್ನು ಗೋಶಾಲೆಗೆ ನೀಡುವಂತೆ ಹಾರ್ದಿಕ್ ಪಟೇಲ್ ಮನವಿ ಮಾಡಿದ್ದಾರೆ. ಅಂತೆಯೇ ಹಾರ್ದಿಕ್ ಬರೆದಿದ್ದ ಪುಸ್ತಕವೊಂದರ ಹಣಕೂಡ ತನ್ನ ಕುಟುಂಬಸ್ಥರಿಗೆ ನೀಡುವಂತೆ ಪ್ರಕಾಶಕರಿಗೆ ಹಾರ್ದಿಕ್ ಮನವಿ ಮಾಡಿದ್ದಾರೆ. 

 

Leave a Reply

Your email address will not be published.

Social Media Auto Publish Powered By : XYZScripts.com