Cricket : ಸೌತ್ಹ್ಯಾಂಪ್ಟನ್ ಟೆಸ್ಟ್ : ಭಾರತಕ್ಕೆ 60 ರನ್ ಸೋಲು – ಸರಣಿ ಇಂಗ್ಲೆಂಡ್ ಕೈವಶ
ಸೌತ್ ಹ್ಯಾಂಪ್ಟನ್ ನ ರೋಸ್ ಬೌಲ್ ಮೈದಾನದಲ್ಲಿ ನಡೆದ 4ನೇ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ 60 ರನ್ ಅಂತರದಿಂದ ಗೆಲುವು ಸಾಧಿಸಿದೆ. ಇದರೊಂದಿಗೆ ಜೋ ರೂಟ್ ನಾಯಕತ್ವದ ಆತಿಥೇಯ ತಂಡ ಟೆಸ್ಟ್ ಸರಣಿಯನ್ನು 3-1 ರಿಂದ ತನ್ನ ಕೈವಶ ಮಾಡಿಕೊಂಡಿದೆ.
ಗೆಲ್ಲಲು 245 ರನ್ ಗುರಿಯನ್ನು ಬೆನ್ನಟ್ಟಿದ್ದ ಭಾರತ ತನ್ನ ಎರಡನೇ ಇನ್ನಿಂಗ್ಸ್ ನಲ್ಲಿ 184 ಕ್ಕೆ ಆಲೌಟ್ ಆಯಿತು. ನಾಯಕ ವಿರಾಟ್ ಕೊಹ್ಲಿ 58, ಅಜಿಂಕ್ಯ ರಹಾನೆ 51 ಹಾಗೂ ರವಿಚಂದ್ರನ್ ಅಶ್ವಿನ್ 25 ರನ್ ಗಳಿಸಿದರು. ಲೋಕೇಶ್ ರಾಹುಲ್, ಹಾರ್ದಿಕ್ ಪಾಂಡ್ಯ, ಇಶಾಂತ್ ಶರ್ಮಾ ಹಾಗೂ ಜಸ್ಪ್ರೀತ್ ಬುಮ್ರಾ ಶೂನ್ಯಕ್ಕೆ ಔಟಾದರು.
ಇಂಗ್ಲೆಂಡ್ ಪರವಾಗಿ ಮೋಯಿನ್ ಅಲಿ 4, ಜೇಮ್ಸ್ ಆ್ಯಂಡರ್ಸನ್ 2 ಹಾಗೂ ಬೆನ್ ಸ್ಟೋಕ್ಸ್ 2 ವಿಕೆಟ್ ಪಡೆದರು. ಪಂದ್ಯದಲ್ಲಿ ಒಟ್ಟು 9 ವಿಕೆಟ್ ಪಡೆದ ಆಲ್ರೌಂಡರ್ ಮೋಯಿನ್ ಅಲಿ ಪಂದ್ಯಶ್ರೇಷ್ಟ ಪ್ರಶಸ್ತಿ ಪಡೆದರು.