ಗದಗ ಜಿಲ್ಲೆ : ಅಸೆಂಬ್ಲಿಯಲ್ಲಿ ಗೆದ್ದ ಬಿಜೆಪಿಗೆ ಹಿನ್ನಡೆ, ಕಾಂಗ್ರೆಸ್ ಚೇತರಿಕೆ..!

ಗದಗ ಜಿಲ್ಲೆಯಲ್ಲಿ 3 ಪುರಸಭೆ ಮತ್ತು 3 ಪಟ್ಟಣ ಪಂಚಾಯ್ತಿಗಳಿಗೆ ನಡೆದ ಚುನಾವಣೆಯಲ್ಲಿ ಪಕ್ಷಗಳ ಮಟ್ಟಿಗೆ ಭಾರಿ ಬದಲಾವಣೆಯೇನೂ ಇಲ್ಲ. ಆದರೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ 4ರಲ್ಲಿ 3 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದ ಬಿಜೆಪಿಗೆ ಹಿನ್ನಡೆ ಆಗಿದೆ. ವಿಧಾನಸಭಾ ಸೋಲಿನಿಂದ ಕಂಗೆಟ್ಟಿದ್ಗ ಕಾಂಗ್ರೆಸ್ ಚೇತರಿಸಿಕೊಂಡಿದೆ. ಇಲ್ಲಿ ಎಂದಿನಂತೆ ಜೆಡಿಎಸ್ ಹಾಗೆ ಸುಮ್ಮನೇ ಅನ್ನುವಂತಾಗಿದೆ.

ಒಂದು ಪುರಸಭೆ, ಒಂದು ಪಟ್ಟಣ ಪಂಚಾಯ್ತಿಗಳಲ್ಲಿ ಬಿಜೆಪಿ ನಿಚ್ಚಳ ಗೆಲುವನ್ನು ಬಿಜೆಪಿ ಸಾಧಿಸಿದ್ದರೆ, 1 ಪುರಸಭೆ, 2 ಪಟ್ಟಣ ಪಂಚಾಯ್ತಿಗಳಲ್ಲಿ ಕಾಂಗ್ರೆಸ್ ಅಧಿಕಾರದ ಗದ್ದುಗೆ ಹಿಡಿದಿದೆ. ಒಂದು ಪುರಸಭೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ರೋಣ ತಾಲೂಕಿನಲ್ಲಿ ಬಿಜೆಪಿ ಶಾಸಕ ಕಳಕಪ್ಪ ಬಂಡಿ ಗಜೇಂದ್ರಗಡ ಪುರಸಭೆ ಮತ್ತು ನರೇಗಲ್ ಪಟ್ಟಣ ಪಂಚಾಯ್ತಿಗಳನ್ನು ಉಳಿಸಿಕೊಳ್ಳಲುಸಲು ಸಫಲರಾಗಿದ್ದಾರೆ. ಆದರೆ ಹಿಂದಿನಂತೆ ರೋಣ ಪುರಸಭೆ ಕಾಂಗ್ರೆಸ್‍ನ ವಶವಾಗಿದೆ.

ಶಿರಹಟ್ಟಿ-ಮುಂಡರಗಿ ಮೀಸಲು ಕ್ಷೇತದ ಅಸೆಂಬ್ಲಿ ಚುನಾವಣೆ ಗೆದ್ದಿದ್ದ ಬಿಜೆಪಿ ಶಿರಹಟ್ಟಿಯ ಪಟ್ಟಣ ಪಂಚಾಯ್ತಿಯನ್ನು ಮತ್ತೆ ಕಾಂಗ್ರೆಸ್‍ಗೇ ಬಿಟ್ಟುಕೊಟ್ಟಿದೆ. ಲಕ್ಷ್ಮೇಶ್ವರ ಪುರಸಭೆಯಲ್ಲಿ ಅತಂತ್ರ ಫಲಿತಾಂಶವಿದ್ದು,ಪಕ್ಷೇತರರ ಬೆಂಬಲದೊಂದಿ ಕಾಂಗ್ರೆಸ್, ಜೆಡಿಎಸ್ ಅಧಿಕಾರ ಹಿಡಿಯುವುದು ಸ್ಪಷ್ಟವಾಗಿದೆ. ವಿಧಾನಸಭಾ ಚುನಾವಣೆಯಲ್ಲಿ 30 ಸಾವಿರ ಮತಗಳ ಅಂತರದ ಗೆಲುವು ಸಾಧಿಸಿದ್ದ ಬಿಜೆಪಿಯ ರಾಮಣ್ಣ ಲಮಾಣಿಗೆ ತೀವ್ರ ಹಿನ್ನಡೆ ಎಂದೇ ಹೇಳಬಹುದು. ಲಕ್ಷ್ಮೇಶ್ವರ ಪುರಸಭೆಯಲ್ಲಿ ಕಾಂಗ್ರೆಸ್ 9, ಬಿಜೆಪಿ 7, ಜೆಡಿಎಸ್ 2 ಮತ್ತು ಪಕ್ಷೇತರರು 5 ಸ್ಥಾನ ಗಳಿಸಿದ್ದು ಪಕ್ಷೇತರರ ಪಾತ್ರ ಮುಖ್ಯವಾಗಲಿದೆ.
ಗದಗ ವಿಧಾನಸಭೆ ಕ್ಷೇತ್ರದಲ್ಲಿ ಕೇವಲ 2 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದ ಎಚ್‍ಕೆ ಪಾಟೀಲರು ತಾಲೂಕಿನ ಮುಳಗುಂದ ಪಟ್ಟಣ ಪಂಚಾಯ್ತಿಯ 18 ಸೀಟುಗಳಲ್ಲಿ 15ರಲ್ಲಿ ಕಾಂಗ್ರೆಸ್‍ಗೆ ಗೆಲುವು ತಂದು ಕೊಡುವಲ್ಲಿ ಸಫಲರಾಗಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com