ಕಲಬುರ್ಗಿ : ಮಾರಕಾಸ್ತ್ರಗಳಿಂದ ಕೊಚ್ಚಿ ಬಿಜೆಪಿ ಕಾರ್ಯಕರ್ತನ ಬರ್ಬರ ಹತ್ಯೆ..!

ಮಾರಕಾಸ್ತ್ರಗಳಿಂದ ಕೊಚ್ಚಿ ಮಾಜಿ ತಾ ಪಂ‌ ಉಪಾಧ್ಯಕ್ಷ ಪುತ್ರನ ಬರ್ಬರ ಹತ್ಯೆ ಮಾಡಿರುವ ಘಟನೆ ಕಲಬುರ್ಗಿ ಜಿಲ್ಲೆಯ ಆಳಂದ ತಾಲೂಕಿನ ಜಿಡಗಾ ಕ್ರಾಸ್ ಬಳಿ ನಡೆದಿದೆ. ರಾಹುಲ್ ಬಿಳಗಿ (25) ಕೊಲೆಯಾದ‌ ದುರ್ದೈವಿಯಾಗಿದ್ದಾನೆ.

ಬೈಕ್ ಮೇಲೆ ಗೆಳೆಯರ ಜೊತೆ ಆಳಂದದಿಂದ ಭೂಸನೂರು ಗ್ರಾಮಕ್ಕೆ ತೆರಳುತ್ತಿದ್ದಾಗ ಬೊಲೆರೊ ವಾಹನದಲ್ಲಿ ಬಂದಿದ್ದ ದುಷ್ಕರ್ಮಿಗಳ ದಾಳಿ ಮಾಡಿ
ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಕೊಲೆಯಾದ ರಾಹುಲ್, ಆಳಂದ ತಾ ಪಂ ಮಾಜಿ ಉಪಾಧ್ಯಕ್ಷ ಲಕ್ಷ್ಮಣ್ ಬಿಳಗಿ ಅವರ ಹಿರಿಯ ಪುತ್ರನಾಗಿದ್ದಾನೆ. ಆಳಂದ ಶಾಸಕ ಸುಭಾಷ್ ಗುತ್ತೇದಾರ ಆಪ್ತನಾಗಿದ್ದ ರಾಹುಲ್ ಬೀಳಗಿ, ತನ್ನ ಸ್ನೇಹಿತರೊಂದಿಗೆ ತಮ್ಮೂರಿಗೆ ಹೋಗುವಾಗ ಬೊಲೆರೊ ವಾಹನದಲ್ಲಿ ಬಂದ ದುಷ್ಕರ್ಮಿಗಳು ಮನಸ್ಸೋ ಇಚ್ಚೆ ಮಾರಕಾಸ್ತ್ರಗಳಿಂದ ಕೊಚ್ಚಿದ್ದಾರೆ.

ರಕ್ತದ ಮಡುವಿನಲ್ಲಿ ಬಿದ್ದಿದ್ದ ಆತನನ್ನು ತಕ್ಷಣ ತಾಲೂಕು ಆಸ್ಪತ್ರೆಗೆ ಕೊಂಡೊಯ್ದರೂ ಮಾರ್ಗಮಧ್ಯದಲ್ಲಿಯೇ ಸಾವುನ್ನಪ್ಪಿದ್ದಾನೆ. ರಾಜಕೀಯ ವೈಷಮ್ಯದ ಹಿನ್ನಲೆ ಈ ಕೊಲೆ ನಡೆದಿದೆ ಎನ್ನಲಾಗಿದೆ. ಸ್ಥಳಕ್ಕೆ ಕಲಬುರಗಿ ಎಸ್ಪಿ ಎನ್ ಶಶಿಕುಮಾರ ಭೇಟಿ, ಪರಿಶೀಲನೆ ನಡೆಸುತ್ತಿದ್ದಾರೆ. ಆಳಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published.