Cricket : ಅಂತರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿದ ಅಲಿಸ್ಟರ್ ಕುಕ್..

ಇಂಗ್ಲೆಂಡ್ ತಂಡದ ಎಡಗೈ ಆರಂಭಿಕ ಬ್ಯಾಟ್ಸಮನ್ ಅಲಿಸ್ಟರ್ ಕುಕ್ ಅಂತರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿ ಘೋಷಿಸಿದ್ದಾರೆ. ಭಾರತದ ವಿರುದ್ಧ ನಡೆಯಲಿರುವ 5ನೇ ಟೆಸ್ಟ್ ಬಳಿಕ ನಿವೃತ್ತರಾಗುವುದಾಗಿ ಅಲಿಸ್ಟರ್ ಕುಕ್ ಸೋಮವಾರ ಹೇಳಿದ್ದಾರೆ. ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ 5ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಲಂಡನ್ನಿನ ಕೆನ್ನಿಂಗ್ಟನ್ ಓವಲ್ ನಲ್ಲಿ ಸೆಪ್ಟೆಂಬರ್ 7 ರಿಂದ ನಡೆಯಲಿದೆ.

ಅಚ್ಚರಿಯೆಂದರೆ ಅಲಿಸ್ಟರ್ ಕುಕ್ ಭಾರತದ ವಿರುದ್ಧ 2006ರಲ್ಲಿ ನಾಗ್ಪುರದಲ್ಲಿ ನಡೆದ ಪಂದ್ಯದ ಮೂಲಕವೇ ಟೆಸ್ಟ್ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದರು. ಟೆಸ್ಟ್ ಕ್ರಿಕೆಟ್ ನಲ್ಲಿ ಇಂಗ್ಲೆಂಡ್ ಪರವಾಗಿ ಅತಿ ಹೆಚ್ಚು ರನ್ (12,254 ರನ್) ಗಳಿಸಿದ ಆಟಗಾರ ಎನಿಸಿರುವ ಅಲಿಸ್ಟರ್ ಕುಕ್, 32 ಶತಕ ಬಾರಿಸಿದ್ದಾರೆ.

ಇಂಗ್ಲೆಂಡ್ ಪರವಾಗಿ 160 ಟೆಸ್ಟ್ ಗಳನ್ನಾಡಿರುವ ಅಲಿಸ್ಟರ್ ಕುಕ್ 56 ಅರ್ಧಶತಕಗಳನ್ನು ಬಾರಿಸಿದ್ದು, 173 ಕ್ಯಾಚ್ ಪಡೆದಿದ್ದಾರೆ.

One thought on “Cricket : ಅಂತರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿದ ಅಲಿಸ್ಟರ್ ಕುಕ್..

Leave a Reply

Your email address will not be published.

Social Media Auto Publish Powered By : XYZScripts.com