ಕೆಸಿಸಿಗೆ ಭದ್ರತೆ ಒದಗಿಸುವಂತೆ ಡಿಸಿಎಂ ಪರಮೇಶ್ವರ್ಗೆ ಕಿಚ್ಚ ಸುದೀಪ್ ಮನವಿ..!
ಬೆಂಗಳೂರು : ಕರ್ನಾಟಕ ಚಲನಚಿತ್ರ ಕ್ರಿಕೆಟ್ ಕಪ್ ಸೆ.8 ಮತ್ತು 9 ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಪೊಲೀಸ್ ಭದ್ರತೆ ನೀಡುವಂತೆ ನಟ ಸುದೀಪ್ ಡಿಸಿಎಂ ಡಾ.ಜಿ. ಪರಮೇಶ್ವರ್ ಅವರನ್ನು ವಿಧಾನಸೌಧದಲ್ಲಿ ಭೇಟಿ ಮಾಡಿ ಮನವಿ ಮಾಡಿದರು.
ಈ ವಿಷಯವನ್ನು ಡಿಸಿಎಂ ಪರಮೇಶ್ವರ್ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ‘ಇಂದು ನಟ ಕಿಚ್ಚ ಸುದೀಪ್ ಭೇಟಿ ಮಾಡಿ ಕರ್ನಾಟಕ ಚಲನಚಿತ್ರ ಕಪ್ ಬಗ್ಗೆ ವಿವರಿಸಿ ಟೂರ್ನಮೆಂಟಿಗೆ ಪೋಲೀಸ್ ಭದ್ರತೆ ಒದಗಿಸುವಂತೆ ಕೋರಿದರು. ಬೇಕಾದ ಎಲ್ಲ ಭದ್ರತೆಯನ್ನು ನೀಡುವ ಭರವಸೆಯನ್ನು ನೀಡಿದೆ. ಟೂರ್ನಮೆಂಟಿನಿಂದ ಬರುವ ಹಣದಿಂದ ಕೊಡಗಿನ ನೆರೆ ಪರಿಹಾರಕ್ಕೂ ನೆರವು ಕೊಡುವ ನಿರ್ಧಾರ ಕೇಳಿ ಖುಷಿಯಾಯಿತು. ಯಶಸ್ವಿಯಾಗಿ ನಡೆಯಲಿ’ ಎಂದು ಡಿಸಿಎಂ ತಮ್ಮ ಟ್ವಿಟರ್ ಖಾತೆಯಲ್ಲಿ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.
ಇಂದು ನಟ @KicchaSudeep ಭೇಟಿ ಮಾಡಿ ಕರ್ನಾಟಕ ಚಲನಚಿತ್ರ ಕಪ್ ಬಗ್ಗೆ ವಿವರಿಸಿ ಟೂರ್ನಮೆಂಟಿಗೆ ಪೋಲೀಸ್ ಭದ್ರತೆ ಒದಗಿಸುವಂತೆ ಕೋರಿದರು. ಬೇಕಾದ ಎಲ್ಲ ಭದ್ರತೆಯನ್ನು ನೀಡುವ ಭರವಸೆಯನ್ನು ನೀಡಿದೆ. ಟೂರ್ನಮೆಂಟಿನಿಂದ ಬರುವ ಹಣದಿಂದ ಕೊಡಗಿನ ನೆರೆ ಪರಿಹಾರಕ್ಕೂ ನೆರವು ಕೊಡುವ ನಿರ್ಧಾರ ಕೇಳಿ ಖುಷಿಯಾಯಿತು. ಯಶಸ್ವಿಯಾಗಿ ನಡೆಯಲಿ! pic.twitter.com/WLhrT75EIj
— Dr. G Parameshwara (@DrParameshwara) September 1, 2018
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಉದ್ಘಾಟನಾ ಕಾರ್ಯಕ್ರಮದ ವೇಳೆ ಅರ್ಬಾಜ್ ಖಾನ್, ಸೊಹೈಲ್ ಖಾನ್, ಸುನಿಲ್ ಶೆಟ್ಟಿ, ಧನುಷ್ ಸೇರಿದಂತೆ ಹಲವು ಗಣ್ಯರು ಆಗಮಿಸಲಿದ್ದಾರೆ. ಇದೇ 8 ರಂದು ಕೆಸಿಸಿ 2ನೇ ಟೂರ್ನಿ ಉದ್ಘಾಟನೆಯಾಗಲಿದ್ದು, ಮೊದಲ ದಿನ 4 ಪಂದ್ಯಗಳು ಹಾಗೂ 2ನೇ ದಿನ 2 ತಂಡಗಳ ಸ್ಪರ್ಧೆ ನಡೆಯಲಿದೆ ಎಂದು ಸುದೀಪ್ ತಿಳಿಸಿದ್ದಾರೆ.