‘ನೂರಕ್ಕೆ ನೂರರಷ್ಟು ಲೋಕಸಭಾ ಚುನಾವಣೆಯಲ್ಲಿ ನಾವೇ ಗೆಲ್ಲುತ್ತೇವೆ’ : ಬಿಎಸ್​ ಯಡಿಯೂರಪ್ಪ

ಬೆಂಗಳೂರು : ‘ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ನಾವು ಇನ್ನೂ ಹೆಚ್ಚು ಸ್ಥಾನ ಗೆಲ್ಲಬೇಕಿತ್ತು,ಆದರೆ ನೂರಕ್ಕೆ ನೂರರಷ್ಟು ಲೋಕಸಭೆಯಲ್ಲಿ ನಾವೇ ಗೆಲ್ಲುತ್ತೇವೆ’ ಎಂದು ಬಿಎಸ್​ ಯಡಿಯೂರಪ್ಪ ಹೇಳಿಕೆ ನೀಡಿದ್ರು.

ಬೆಂಗಳೂರಿನ  ಡಾಲರ್ಸ್ ಕಾಲೋನಿಯಲ್ಲಿರುವ ತಮ್ಮ ನಿವಾಸದಲ್ಲಿ  ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ, ‘ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ನಾವು ಇನ್ನೂ ಹೆಚ್ಚು ಸ್ಥಾನ ಗೆಲ್ಲಬೇಕಿತ್ತು, ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಆಡಳಿತ ಇರೊದ್ರಿಂದ ನಿರೀಕ್ಷಿತ ಸ್ಥಾನ ಗಳಿಸಲು ಸಾಧ್ಯವಾಗಲಿಲ್ಲ. ಇದು ಸಮ್ಮಿಶ್ರ ಸರ್ಕಾರದ ಮೇಲೆ ಯಾವುದೇ ಪರಿಣಾಮ ಬಿರೋದಿಲ್ಲ.  ಆದರೆ ಲೋಕಸಭಾ ಚುನಾವಣೆಯಲ್ಲಿ ನೂರಕ್ಕೆ ನೂರರಷ್ಟು ನಾವೇ ಗೆಲ್ಲುತ್ತೇವೆ’ ಎಂದು ಭವಿಷ್ಯ ನುಡಿದಿದ್ದಾರೆ.

‘ಇನ್ನು 29 ನಗರಸಭೆಯಲ್ಲಿ ಬಿಜೆಪಿಗೆ 15 , ಕಾಂಗ್ರೆಸ್ 9 ಮತ್ತು ಜೆಡಿಎಸ್ 3 ರಲ್ಲಿ ಗೆದ್ದಿವೆ,  53 ಪುರಸಭೆಗಳಲ್ಲಿ ಬಿಜೆಪಿ 11, ಕಾಂಗ್ರೆಸ್ 28 ಮತ್ತು ಜೆಡಿಎಸ್ 8 ಗೆದ್ದಿದೆ, 23 ಪಟ್ಟಣ ಪಂಚಾಯ್ತಿಗಳಲ್ಲಿ ಬಿಜೆಪಿಗೆ 8, ಕಾಂಗ್ರೆಸ್ 9, ಜೆಡಿಎಸ್ 2 ಪಟ್ಟಣ ಪಂಚಾಯಿತ ಗೆದ್ದಿವೆ. ಇನ್ನು ಮೂರು ಮಹಾನಗರ ಪಾಲಿಕೆಗಳ ಪೈಕಿ ಶಿವಮೊಗ್ಗದಲ್ಲಿ ಬಿಜೆಪಿಗೆ ಬಹುಮತ ಬಂದಿದೆ, ನಮ್ಮ ಜಿಲ್ಲೆಯಲ್ಲಿ ದೊಡ್ಡ ಅಂತರದಿಂದ ಬಹುಮತ ಗಳಿಸಿದ್ದೇವೆ. ಆಡಳಿತ ಪಕ್ಷ ಹಣ ಬಲ, ಶಕ್ತಿ, ಕಾಂಗ್ರೆಸ್ ಜೆಡಿಎಸ್ ಹೊಂದಾಣಿಕೆಗಳಿಂದ ನಾವು ನಿರೀಕ್ಷೆ ಮಾಡಿದಷ್ಟು ಗೆಲುವು ಸಿಕ್ಕಿಲ್ಲ ನಮಗೆ ಕೆಲವು ಕಡೆ ಹಿನ್ನಡೆಯಾಗಿದೆ’ ಎಂದು ತಿಳಿಸಿದ್ರು.

bsy angry ಗೆ ಚಿತ್ರದ ಫಲಿತಾಂಶ

‘ಮೈಸೂರಿನಲ್ಲೂ ದೊಡ್ಡ ಅಂತರದಲ್ಲಿ ಮಹಾನಗರಪಾಲಿಕೆಯಲ್ಲಿ 22 ಸೀಟು ಗೆದ್ದಿದ್ದೇವೆ, ತುಮಕೂರಿನಲ್ಲಿ ಸಹಾ ನಾವು ಹೋರಾಟ ಮಾಡಿದ್ದೇವೆ. ಒಟ್ಟಾರೆ ಫಲಿತಾಂಶ ನಮಗೆ ಸ್ವಲ್ಪ ಸಮಾಧಾನ ತಂದಿದೆ, ಮುಂದೆ ಪಕ್ಷವನ್ನು ಇನ್ನಷ್ಟು ಬಲಪಡಿಸುವತ್ತ ಗಮನ ಕೊಡುತ್ತೇವೆ’ ಎಂದು ಬಿಎಸ್​ವೈ ಸಂತೋಷ ವ್ಯಕ್ತಪಡಿಸಿದ್ದಾರೆ.

ಸಮ್ಮಿಶ್ರ ಸರ್ಕಾರದ ಬಗ್ಗೆ ನಾವು ತಲೆಕೆಡಿಸಿಕೊಳ್ಳಲು ಹೋಗಲ್ಲ, ಸರ್ಕಾರ ಬೀಳುತ್ತೆ ಅನ್ನೋದ್ರ ಬಗ್ಗೆ ನಾವು ಮಾತಾಡಲ್ಲ, 104 ಸ್ಥಾನ ಇರುವ ನಾವು ವಿರೋಧ ಪಕ್ಷವಾಗಿ ಕೆಲಸ ಮಾಡುತ್ತೇವೆ ಎಂದು ತಿಳಿಸಿದ್ರು.

Leave a Reply

Your email address will not be published.

Social Media Auto Publish Powered By : XYZScripts.com