ಸುದೀಪ್​ ಹುಟ್ಟುಹಬ್ಬಕ್ಕೆ ‘ಸೈರಾ ನರಸಿಂಹ ರೆಡ್ಡಿ’ ಚಿತ್ರತಂಡದಿಂದ ಭರ್ಜರಿ ಗಿಫ್ಟ್​..!

ಬೆಂಗಳೂರು : ಕಿಚ್ಚನ ಈ ವರ್ಷದ ಹುಟ್ಟು ಹಬ್ಬಕ್ಕೆ ವಿಶೇಷವಾಗಿ ಉಡುಗೊರೆಗಳ ಮಹಾಪೂರವೇ ಬರುತ್ತಿದ್ದು, ಟಾಲಿವುಡ್​ನಿಂದ ಸುದೀಪ್​ಗೆ  ಭರ್ಜರಿ ಗಿಫ್ಟ್​ ಒಂದು ಬಂದಿದೆ. ಅದೇನೆಂದರೆ, ಸುದೀಪ್ ನಟನೆಯ ಹೊಸ ತೆಲುಗು ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಿದೆ.

Sudeep look from SyeRaa Narasimha Reddy is out

ಮೆಗಾ ಸ್ಟಾರ್​ ಚಿರಂಜೀವಿ ಅವರ 151 ನೇ ಸಿನಿಮಾ ಸೈರಾ ನರಸಿಂಹ ರೆಡ್ಡಿ ಈ ಸಿನಿಮಾದ ಒಂದು ಬಹು ಮುಖ್ಯ ಪಾತ್ರದಲ್ಲಿ ಸುದೀಪ್​ ಕಾಣಿಸಿಕೊಳ್ಳುತ್ತಿದ್ದಾರೆ. ಸುದೀಪ್ ಹುಟ್ಟುಹಬ್ಬದ ವಿಶೇಷವಾಗಿ ಈ ಪೋಸ್ಟರ್ ಅನ್ನು ರಿಲೀಸ್ ಮಾಡಲಾಗಿದೆ. ‘ಬಾಹುಬಲಿ’ ಬಳಿಕ ಮತ್ತೆ ಸುದೀಪ್ ಕೂಗು ಟಾಲಿವುಡ್ ನಲ್ಲಿ ಹೆಚ್ಚಾಗಿದೆ.

ಇನ್ನು ಈ ಪೋಸ್ಟರ್ ನಲ್ಲಿ ಕಪ್ಪು ಬಟ್ಟೆ ಧರಿಸಿ, ಉದ್ದನೆಯ ದಡ್ಡ ಬಿಟ್ಟು ರಾಜನಂತೆ ಸುದೀಪ್ ಅದ್ಬುತವಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ಅವರ ಪಾತ್ರದ ಹೆಸರನ್ನು ಪೋಸ್ಟರ್ ನಲ್ಲಿ ರಿವೀಲ್​ ಮಾಡಿಲ್ಲ. ಆದರೆ, ಸ್ವಾತಂತ್ಯ ಹೋರಾಟಗಾರ ‘ಸೈರಾ ನರಸಿಂಹ ರೆಡ್ಡಿ’ ಅವರ ಜೀವನ ಆಧಾರಿತ ಚಿತ್ರಕಥೆಯಾಗಿದ್ದು, ಇದರಲ್ಲಿ ನರಸಿಂಹ ರೆಡ್ಡಿಗೆ ಸಹಾಯ ಮಾಡುವ ರಾಜನಾಗಿ ಸುದೀಪ್ ಕಾಣುತ್ತಿದ್ದಾರೆಂದು  ತಿಳಿದುಬಂದಿದೆ.

Leave a Reply

Your email address will not be published.

Social Media Auto Publish Powered By : XYZScripts.com