ಆದಿವಾಸಿ ಮಕ್ಕಳ ಕಲಿಕೆ ಬಗ್ಗೆ ಯದುವಂಶದ ಸೊಸೆಯ ಕಾಳಜಿ : ಸಂಶೋಧನೆಗೆ ಮುಂದಾದ ತ್ರಿಷಿಕಾ ಕುಮಾರಿ

ಮೈಸೂರು : ಮೈಸೂರು ಯದುವಂಶದ ಸೊಸೆ ತ್ರಿಷಿಕಾ ಕುಮಾರಿ ಒಡೆಯರ್ ಇದೀಗ ಆದಿವಾಸಿ ಮಕ್ಕಳ ಬಗ್ಗೆ ಸಂಶೋಧನೆ ಮಾಡಲು ಮುಂದಾಗಿದ್ದಾರೆ.

ಬೆಂಗಳೂರಿನ ಕ್ರೈಸ್ಟ್ ಕಾಲೇಜಿನಲ್ಲಿ ಎಂಬಿಎ ಪದವಿ ಪಡೆದಿರೋ  ತ್ರಿಷಿಕಾ ಕುಮಾರಿ ಅವರು ಸದ್ಯ ಆದಿವಾಸಿ ಮಕ್ಕಳ ಕಲಿಕೆ ಬಗ್ಗೆ ಸಂಶೋಧನೆ ಮಾಡಲು ಮುಂದಾಗಿದ್ದಾರೆ. ಸರ್ಕಾರಿ ಶಾಲೆಗಳ ಗುಣಮಟ್ಟದ ಬಗ್ಗೆ ಜಿಲ್ಲಾ ಉಪ ನಿರ್ದೇಶಕಿ ಮಮತ ಜೊತೆ ಚರ್ಚೆ ನಡೆಸಿದ್ರು. ಇನ್ನು ಸಂಶೋಧನೆ ಭಾಗವಾಗಿ ಖುದ್ದು ಆದಿವಾಸಿ ಮಕ್ಕಳ ಕಲಿಕಾ ಕೇಂದ್ರಗಳಿಗೆ ಭೇಟಿ ನೀಡಲು ತ್ರಿಷಿಕಾ ನಿರ್ಧರಿಸಿದ್ದಾರೆ.

ಮೈಸೂರಿನ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳ ಕುರಿತು  ಯದುವಂಶಸ್ಥ ಯದುವೀರ್ ಅವರ ಪತ್ನಿ ತ್ರಿಷಿಕಾ ಕುಮಾರಿ ಅವರು ಪಿಹೆಚ್‌ಡಿ ಮಾಡಲು ನಿರ್ಧರಿಸಿದ್ದು ಇದಕ್ಕಾಗಿ ಈಗಾಗಲೇ ಜಿಲ್ಲೆಯಲ್ಲಿ ಸರ್ಕಾರಿ ಶಾಲೆಗಳ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಕಲೆಹಾಕಿದ್ದಾರೆ. ಬುಡಕಟ್ಟು ಮಕ್ಕಳ ನಿತ್ಯಜೀವನ, ಓದಿನ ಗುಣಮಟ್ಟ, ಸರ್ಕಾರದಿಂದ ನೀಡುತ್ತಿರುವ ಸೌಲಭ್ಯಗಳ ಬಗ್ಗೆ  ಯದುವಂಶದ ಸೊಸೆ ಸಂಶೋಧನೆ ಮಾಡಲಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com