ಕೊಡಗು : ಯುವತಿಯ ಪ್ರಾಣವನ್ನೇ ಬಲಿ ತೆಗೆದುಕೊಂಡ ಹೇರ್​ ಸ್ಟ್ರೆಂಟ್ನಿಂಗ್..?

ಕೊಡಗು  : ಹೇರ್ ಸ್ಟ್ರೆಂಟ್ನಿಂಗ್​ಗೆ ಮಾರು ಹೋದ ಕಾಲೇಜ್​ ಯುವತಿಯೊಬ್ಬಳು ತನ್ನ ಜೀವವನ್ನೇ ಬಲಿಕೊಟ್ಟ ವಿಚಿತ್ರ ಘಟನೆ ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಕೊಟ್ಟಗೇರಿಯಲ್ಲಿ ನಡೆದಿದೆ.

19 ವರ್ಷದ ನೇಹಾ ಗಂಗಮ್ಮ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ನತದೃಷ್ಟೆ. ನೇಹಾ ಮೈಸೂರಿನ ಸೆಂಟ್ ಜೋಸೆಫ್ ಕಾಲೇಜಿನಲ್ಲಿ ಮೊದಲ ವರ್ಷದ ಬಿಬಿಎ ವ್ಯಾಸಂಗ ಮಾಡುತ್ತಿದ್ದಳು. ಈ ವೇಳೆ ಏನೇನೋ ಆಫರ್ ಇದೆ, ಅಂತಾ ನೇಹಾಳನ್ನ ಮೋಡಿ ಮಾಡಿದ ಮೈಸೂರಿನ ರೋಹಿಣಿ ಬ್ಯೂಟಿ ಪಾರ್ಲರ್ ಝೋನ್ ಸಿಬ್ಬಂದಿ, ಒಂದೂವರೆ ತಿಂಗಳ ತಿಂಗಳ ಹಿಂದೆ ನೇಹಾಳಿಗೆ ಹೇರ್ ಸ್ಟ್ರೈಟ್ನಿಂಗ್ ಮಾಡಿದ್ದಾರೆ.

ಆ ಹೇರ್ ಸ್ಟ್ರೈಟ್ನಿಂಗ್ ನಿಂದ ನೇಹಾಳ ತಲೆ ಕೂದಲು ಪ್ರತಿ ದಿನ ಉದುರ ತೊಡಗಿದೆ. ಇದರಿಂದ ಕಂಗಲಾದ ನೇಹಾ, ತನ್ನ ಸ್ವಂತ ಊರದ ವಿರಾಜಪೇಟೆಯ ಕೊಟ್ಟಗೇರಿಗೆ ಬಂದು ಹೆತ್ತವರೊಂದಿಗೆ ನೋವನ್ನ ತೋಡಿಕೊಂಡಿದ್ದಾಳೆ. ತಾನು ಕಾಲೇಜಿಗೆ ಹೋಗಲ್ಲ ಅಂತಾ ಹಠ ಹಿಡಿದಿದ್ದಾಳೆ. ಕೊನೆಗೆ ಹೇಗೋ ಮಗಳನ್ನ ಸಮಧಾನ ಮಾಡಿ ತಂದೆ-ತಾಯಿ, ಕಾಲೇಜಿಗೆ ಹೋಗದೇ ಮನೆಯಲ್ಲೇ ಇದ್ರೇ ಅಕ್ಕಪಕ್ಕದವರು ಆಡಿ ಕೊಳ್ಳುತ್ತಾರೆ ಅಂತಾ ಬುದ್ಧಿವಾದ ಹೇಳಿ ಕಳುಹಿಸಿದ್ದಾರೆ.

 

ಆಗಸ್ಚ್ 21ಕ್ಕೆ ತನ್ನೂರಿನಿಂದ ಮೈಸೂರಿಗೆ ನೇಹಾ ಹೋಗಿದ್ದಾಳೆ. ಮತ್ತೆ ಹೇರ್ ಫಾಲ್ ಕಂಟಿನ್ಯೂ ಆದಾಗ ಬಾಳನ್ನ ಬೆಳಗಿಸಿಕೊಳ್ಳಬೇಕಾದ ನೇಹಾಗೆ ತೋಚಿದ್ದೇ ಸಾವಿನ ದಾರಿ. ಆ ಬಳಿಕ ಹಿಂದೆ ಮುಂದೆ ನೋಡದ ನೇಹಾ, ಆಗಸ್ಟ್ 28ರಂದು ಕೊಟ್ಟಗೇರಿ ಹೋಗೋ ದಾರಿಯಲ್ಲಿ ಮಲ್ಲೂರು ಸಮೀಪ ಲಕ್ಷ್ಮಣ ತೀರ್ಥ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸಾಯೋ ಮುನ್ನವೂ ನೇಹಾ ಗಂಗಮ್ಮ(19) ರೋಹಿಣಿ ಬ್ಯೂಟಿ ಪಾರ್ಲರ್ ಝೋನ್ ಗೆ ಕರೆ ಮಾಡಿ ಕೊನೆಯ ಮಾತನಾಡಿರೋದು ಆಕೆಯ ಎಷ್ಟು ಖಿನ್ನತೆಗೆ ಒಳಗಾಗಿದ್ದಳು ಅನ್ನೋದನ್ನ ತೋರಿಸುತ್ತದೆ. ಅಂದಿನಿಂದ ನೇಹಳಾ ಹುಡುಕಾಟದಲ್ಲಿದ್ದ ಪೋಷಕರಿಗೆ ನಿನ್ನೆ ಸಂಜೆ ನೇಹಳಾ ಮೃತದೇಹ ಮಲ್ಲೂರಿನಲ್ಲಿ ಪತ್ತೆಯಾಗಿದೆ.

ಇದ್ದ ಒಬ್ಬ ಮಗಳನ್ನ ಕಳೆದುಕೊಂಡ ತಂದೆ ಪೆಮ್ಮಯ್ಯ ತಾಯಿ ಶೈಲಾಗೆ ಆಕಾಶವೇ ಕಳಚಿ ಬಿದ್ದ ಅನುಭವ ಆಗಿದೆ. ತನ್ನ ಮಗಳ ಸಾವಿಗೆ ಕಾರಣವಾದ ಮೈಸೂರಿನ ರೋಹಿಣಿ ಬ್ಯೂಟಿ ಪಾರ್ಲರ್ ಝೋನ್ ನ ಮಾಲೀಕರಿಗೆ ಶಿಕ್ಷೆ ಕೊಡಿಸಿ, ನಮಗೆ ನ್ಯಾಯ ದೊರಕಿಸಿ ಕೊಡಿ ಅಂತಾ ನೇಹಾ ಪೋಷಕರು ಆಗ್ರಹಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com