ಇದು ಅಪವಿತ್ರ ಮೈತ್ರಿ, ಹೊಂದಾಣಿಕೆ ಹಾಗೂ ಸಮನ್ವಯತೆ ಇಲ್ಲದ ಸರ್ಕಾರ : ಜಗದೀಶ್​ ಶೆಟ್ಟರ್​

ದಾವಣಗೆರೆ : ಇದು ಅಪವಿತ್ರ ಮೈತ್ರಿ, ಹೊಂದಾಣಿಕೆ ಹಾಗೂ ಸಮನ್ವಯತೆ ಇಲ್ಲದ ಸರ್ಕಾರ, ಯಾವಾಗ ಬೇಕಾದರೂ ಹೊಡೆದು ಹೋಗಬಹುದು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಭವಿಷ್ಯ ನುಡಿದಿದ್ದಾರೆ.

ನಗರದ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಜಗದೀಶ್​, ಸಮ್ಮಿಶ್ರ ಸರ್ಕಾರದಲ್ಲಿ ಯಾವುದೂ ಸರಿ ಇಲ್ಲ. ಕ್ಯಾಬಿನೆಟ್ ವಿಸ್ತೀರ್ಣದ ನಂತರ ಸರ್ಕಾರ ಪತನವಾಗಲಿದೆ. ಜನಾದೇಶವನ್ನು ಮರೆತು ಸಮ್ಮಿಶ್ರ ಸರ್ಕಾರ ಮಾಡಿಕೊಂಡಿದ್ದು, ಇದು ಅಪವಿತ್ರ ಮೈತ್ರಿಯಾಗಿದ್ದಲ್ಲದೇ ಹೊಂದಾಣಿಕೆ ಹಾಗೂ ಸಮನ್ವಯತೆ ಇಲ್ಲದೆ ಇರುವ ಸರ್ಕಾರವಾಗಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಈಗಲೂ ಸಹ ಪರಸ್ಪರ ಮುಖ ನೋಡಿಕೊಳ್ಳುವುದಿಲ್ಲ.

100 ದಿನಗಳ ಸಂಭ್ರಮಾಚರಣೆಯನ್ನು ಸರ್ಕಾರದಿಂದ ಆಚರಣೆ ಮಾಡಿಲ್ಲ. ಕೇವಲ ಜೆಡಿಎಸ್ ಪಕ್ಷದಿಂದ ಮಾತ್ರ ಪತ್ರಿಕೆಗಳಲ್ಲಿ ಜಾಹಿರಾತು ನೀಡಿದರು. ಇದರಲ್ಲೇ ಗೊತ್ತಾಗುತ್ತೆ ಅವರಲ್ಲಿ ಎಷ್ಟರ ಮಟ್ಟಿಗೆ ಹೊಂದಾಣಿಕೆ ಇದೆ ಎನ್ನುವುದು ಅಂತ ಟೀಕಿಸಿದರು.

 

Leave a Reply

Your email address will not be published.