ಚಿಕ್ಕಮಗಳೂರು : ಮುಂದುವರೆದ ಕಾಡಾನೆಗಳ ದಾಳಿ : ಲಕ್ಷಾಂತರ ಮೌಲ್ಯದ ಬೆಳೆ ನಾಶ..!

ಚಿಕ್ಕಮಗಳೂರು : ಮುಂದುವರೆದ ಕಾಡಾನೆ ಹಾವಳಿಯಿಂದ ಲಕ್ಷಾಂತರ ಮೌಲ್ಯದ ‌ಕಾಫಿ, ಮೆಣಸು, ಬಾಳೆ ,ಅಡಿಕೆ ಬೆಳೆ ಸಂಪೂರ್ಣ ನಾಶ ಮಾಡಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

ನಿರಂತರವಾಗಿ ಮೂಡಿಗೆರೆ ತಾಲೂಕಿನ ಕಾಡಂಚಿನ ಪ್ರದೇಶಗಳಿಗೆ ದಾಳಿ ಮಾಡುತ್ತಿರುವ ಕಾಡಾನೆಗಳ ದಾಳಿಯಿಂದ ಕಾಫಿ ತೋಟ ಸೇರಿದಂತೆ ಗದ್ದೆಗಳಲ್ಲಿ ಕೆಲಸ ಮಾಡಲು ಕಾರ್ಮಿಕರು  ಭಯ ಪಡುತ್ತಿದ್ದಾರೆ. ಕಾಡಾನೆಗಳನ್ನು ಸೆರೆಹಿಡಿದು ಕಾಡಿಗೆ ಬಿಡುವಂತೆ ಗ್ರಾಮಸ್ಥರು ಆಗ್ರಹಿಸಿದ್ರು.

ಇನ್ನು ಮಾಹಿತಿ ನೀಡಿದ್ರು ಸ್ಥಳಕ್ಕೆ ಬಾರದ ಮೂಡಿಗೆರೆ ವಲಯ ಅರಣ್ಯ ಇಲಾಖೆಯ ಅಧಿಕಾರಿಗಳ‌ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

Leave a Reply

Your email address will not be published.