ರಾಜ್ಯದಲ್ಲಿ ಸರ್ಕಾರ ವರ್ಗಾವಣೆ ದಂಧೆಯಲ್ಲಿ ಮುಳುಕಿದೆ, ಬದುಕಿದ್ದು ಸತ್ತು ಹೋಗಿದೆ : ಬಿಎಸ್​ವೈ

ಬಾಗಲಕೋಟೆ : ರಾಜ್ಯದಲ್ಲಿ  ಸರ್ಕಾರ ಬದುಕಿದ್ದು ಸತ್ತು ಹೋಗಿದೆ, ದುಡ್ಡು ತಿಂದು ವರ್ಗಾವಣೆಯಲ್ಲಿ ದಂಧೆಗೆ ಸರ್ಕಾರ ಇಳಿದಿದೆ, ಎಂದು ಮುಧೋಳದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ.

ಮೂಧೋಳದಲ್ಲಿ ಮಾತನಾಡಿದ  ಮಾಜಿ ಸಿಎಂ ಬಿಎಸ್​ವೈ, ‘ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಶೇ. 50 ರಷ್ಟು ಸ್ಥಾನ ಬಿಜೆಪಿಗೆದೆ, ರಾಜ್ಯದಲ್ಲಿ ಸರ್ಕಾರ ಬದುಕಿದ್ದು ಸತ್ತು ಹೋಗಿದೆ, ದುಡ್ಡು ತಿಂದು ವರ್ಗಾವಣೆ ಹೆಸರಲ್ಲಿ ದಂಧೆಗೆ ಸರ್ಕಾರ ಇಳಿದಿದೆ. ಒಂದೇ ಒಂದು ಅಭಿವೃದ್ದಿ ಕಾರ್ಯ ನಡೆತಿಲ್ಲ, ಸಾಲಮನ್ನಾ ಬಗ್ಗೆ ಸ್ಪಷ್ಟತೆ ಇಲ್ಲ. ಸಹಕಾರಿ ಬ್ಯಾಂಕ್ ಗಳು ದಿವಾಳಿ ಆಗುತ್ತಿವೆ, ನೂರು ದಿನಗಳು ಆಗಿದ್ದರು ಸಿಎಂ ಉತ್ತರ ಕರ್ನಾಟಕದಲ್ಲಿ ಒಂದು ದಿನ ಪ್ರವಾಸ ಮಾಡಿಲ್ಲ. ರಾಜ್ಯದ 13 ಜಿಲ್ಲೆಗಳಲ್ಲಿ ಭೀಕರ ಬರ ಇದ್ದರೂ ಬಂದಿಲ್ಲ’ ಎಂದು ದೊಸ್ತಿ ಸರ್ಕಾರದ ಇರುದ್ಧ ಕಿಡಿಕಾರಿದ್ದಾರೆ.

‘ಸಮನ್ವಯ ಸಮಿತಿ ಸಭೆ ನಡೆಸಿದ್ದ ದೊಡ್ಡ ಸಾಧನೆ ಅಂಥ ಸಿದ್ದರಾಮಯ್ಯ ಭಾವಿಸಿದ್ದಾರೆ. ರಾಜ್ಯದಲ್ಲಿ ತುಘಲಕ್ ಆಡಳಿತ ನಡೆಯುತ್ತಿದೆ. ಪರಿಸ್ಥಿತಿ ನೋಡಿದ್ರೆ ಸರ್ಕಾರ ಬಹಳ ದಿನ ಉಳಿಯಲ್ಲ. ಅನಿಸುತ್ತಿದೆ. ಕಾಂಗ್ರೆಸ್ ನಲ್ಲಿ ಗೊಂದಲದ ವಾತಾವರಣ ಇದೆ,  ರಾಜ್ಯದಲ್ಲಿ ಆರು ತಿಂಗಳಿಂದ ಅಭಿವೃದ್ಧಿ ಕಾರ್ಯಗಳು ಸಂಪೂರ್ಣ ಸ್ಥಗಿತಗೊಂಡಿದೆ.  ಮತ್ತೆ ಆಗ್ತೇನೆ ಅಂಥ ಸಿದ್ದರಾಮಯ್ಯ ಹೇಳಿಕೆ ಹಿಂದೆ ಅವರ ಮನದಾಳ ಇದೆ, ಸರ್ಕಾರ ಸರಿಯಾಗಿ ನಡೆತೀಲ್ಲ ಅಂತ ಅರ್ಥ. ತಮ್ಮ ಹಾಗೂ ಸಿದ್ದರಾಮಯ್ಯ ಫೋನ್ ಕದ್ದಾಲಿಕೆ ತನಿಖೆ ಆಗಬೇಕು, ತಮ್ಮ ಪೋನ್ ಕದ್ದಾಲಿಕೆ ಮಾಡ್ತಿರೋದು ಸತ್ಯ, ಲೋಕಸಭೆಗೆ ಸಿದ್ದರಾಮಯ್ಯ ಎಲ್ಲಿಂದಾದ್ರು ನಿಲ್ಲಲಿ. ನಮಗೇನು ಆಗಲ್ಲ. ಮೋದಿ ಇಮೇಜ್ ದಿನೇ ದಿನೇ ಜಾಸ್ತಿ ಆಗ್ತಿದೆ. ನಾವೇ ಗೆಲ್ತೇವಿ ಎಂದು ಬಿಎಸ್​ ವೈ ಹೇಳಿಕೊಂಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com