WATCH : ‘ಅಂಬಿ ನಿಂಗೆ ವಯಸ್ಸಾಯ್ತೋ’ ಚಿತ್ರದ ‘ಹೇ ಜಲೀಲ’ ಸಾಂಗ್​ ರಿಲೀಸ್​ : ವಿಡಿಯೋ ವೈರಲ್​

ಬೆಂಗಳೂರು : ಬಹಳ ವರ್ಷಗಳ ನಂತರ ಅಂಬರೀಷ್‌ ನಾಯಕರಾಗಿ ನಟಿಸುತ್ತಿರುವ ಅಂಬಿ ನಿಂಗೆ ವಯಸ್ಸಾಯ್ತೋ ಸಿನಿಮಾದಲ್ಲಿ ಹೇ ಜಲೀಲ ಎಂಬ ಹಾಡು ರಿಲೀಸ್​ ಆಗಿದ್ದು, ಅಂಬಿ ಹಾಡು ಕೇಳಿ ಫುಲ್​ ದಿಲ್​ ಖುಷ್​ ಆಗಿದ್ದಾರೆ.

ಸಂಬಂಧಿತ ಚಿತ್ರ

‘ಫುಲ್‌ ಬಾಟಲ್‌ ವಿಸ್ಕಿ ಕುಡಿದಂಗಾಗದೆ, ಮಂಡ್ಯ ಗೌಡರ ನಡಿಗೆ ಜೂಮ್‌ನಲ್ಲಿದೆ, ಎಂದು ಶುರುವಾಗುವ  ‘ಹೇ ಜಲೀಲ ಹೇ ಜಲೀಲ’  ಹಾಡು ಈಗ ಆನ್‌ಲೈನ್‌ನಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ.  ಈ ಹಾಡು ನಟ ಅಂಬರೀಷ್‌ ಬದುಕಿಗೆ ಕನೆಕ್ಟ್ ಆಗುತ್ತದೆ ಎಂದು ಹಾಡು ಕೇಳಿದ ಚಿತ್ರರಂಗದವರು ತಿಳಿಸಿದ್ದಾರೆ.

ಈ ಹಾಡನ್ನು ನಿರ್ದೇಶಕ ಪ್ರೇಮ್​ ಬರೆದಿದ್ದು, ವಯಸ್ಸಾದ್ರೂ ಅಂಬಿಗೆ ಅಭಿಮಾನಿಗಳ ಸಂಖ್ಯೆ ಹೆಚ್ಚು, ಅವರು ಮಾಡುವ ಕೆಲಸ ಎಲ್ಲವೂ ರಾಕೇಟ್‌ ಸ್ಪೀಡ್‌ನಲ್ಲಿದೆ. ಇದನ್ನು ಗಮನದಲ್ಲಿಟ್ಟುಕೊಂಡೇ ಈ ಹಾಡನ್ನು ಬರೆದೆ, ಪ್ರತಿ ಪದವೂ ಅಂಬರೀಷ್‌ ಅವರ ನಿಜ ಜೀವನಕ್ಕೆ ಸೂಟ್‌ ಆಗುತ್ತದೆ. ಅವರನ್ನು ತುಂಬಾ ಹತ್ತಿರದಿಂದ ನೋಡಿದ ಕಾರಣಕ್ಕೆ ಅವರ ಬಗ್ಗೆ ಹಾಡು ಬರೆದಿದ್ದೇನೆ. ಈಗಾಗಲೇ ಹಾಡು ಕೇಳಿದವರೆಲ್ಲ ಅವರ ಹೇಗಿದ್ದಾರೋ ಹಾಗೆ ಬರೆದಿದ್ದೀರಾ ಎಂದಿದ್ದಾರೆ. ನಾನು ಎಷ್ಟು ಹಾಡುಗಳನ್ನು ಬರೆದಿರಬಹುದು ಆದರೆ ಇದು ನನ್ನ ಆಲ್‌ಟೈಮ್‌ ಫೇವರೇಟ್‌ ಹಾಡು’ ಎಂದು ಪ್ರೇಮ್‌ ಹೇಳಿಕೊಂಡಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com