ಟೆಸ್ಟ್ ಕ್ರಿಕೆಟ್‍ನಲ್ಲಿ ಕೊಹ್ಲಿ 6000 ರನ್ ಗಳಿಕೆ : ಸಚಿನ್, ದ್ರಾವಿಡ್, ಸೆಹ್ವಾಗ್ ಹಿಂದಿಕ್ಕಿದ ವಿರಾಟ್

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ ನಲ್ಲಿ 6000 ರನ್ ಗಡಿ ದಾಟಿದ್ದಾರೆ. ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವೆ ಸೌತ್ ಹ್ಯಾಂಪ್ಟನ್ ನಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದ ಎರಡನೇ ದಿನವಾದ ಶುಕ್ರವಾರ ವಿರಾಟ್ ಈ ಸಾಧನೆ ಮಾಡಿದ್ದಾರೆ.

ಟೆಸ್ಟ್ ಕ್ರಿಕೆಟ್ ನಲ್ಲಿ ಅತಿ ವೇಗವಾಗಿ 6000 ರನ್ ಪೂರೈಸಿದ ಭಾರತೀಯ ಕ್ರಿಕೆಟಿಗರ ಸಾಲಿನಲ್ಲಿ ಕೊಹ್ಲಿ ಎರಡನೇ ಸ್ಥಾನದಲ್ಲಿದ್ದಾರೆ. 70 ಟೆಸ್ಟ್ ಪಂದ್ಯಗಳ 119 ಇನ್ನಿಂಗ್ಸ್ ಗಳನ್ನಾಡಿ ಕೊಹ್ಲಿ ಆರು ಸಾವಿರ ರನ್ ಪೂರೈಸಿದ್ದಾರೆ. 65 ಟೆಸ್ಟ್ ಪಂದ್ಯಗಳಲ್ಲಿ 117 ಇನ್ನಿಂಗ್ಸ್ ಗಳಲ್ಲಿ 6 ಸಾವಿರ ರನ್ ಗಡಿ ದಾಟಿದ ಮಾಜಿ ಆಟಗಾರ ಸುನೀಲ್ ಗವಾಸ್ಕರ್ ಮೊದಲ ಸ್ಥಾನದಲ್ಲಿದ್ದಾರೆ.

ಅಲ್ಲದೇ ರನ್ ಮಷಿನ್ ವಿರಾಟ್ ಕೊಹ್ಲಿ, ಬ್ಯಾಟಿಂಗ್ ದಿಗ್ಗಜರೆನಿಸಿಕೊಂಡ ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್ ಹಾಗೂ ರಾಹುಲ್ ದ್ರಾವಿಡ್ ಅವರನ್ನು ಹಿಂದಿಕ್ಕಿದ್ದಾರೆ. ಸಚಿನ್ (76 ಟೆಸ್ಟ್ 120 ಇನ್ನಿಂಗ್ಸ್) ಸೆಹ್ವಾಗ್ (72 ಟೆಸ್ಟ್, 123 ಇನ್ನಿಂಗ್ಸ್) ದ್ರಾವಿಡ್ (73 ಟೆಸ್ಟ್, 125 ಇನ್ನಿಂಗ್ಸ್) ಗಳಲ್ಲಿ ಾರು ಸಾವಿರ ರನ್ ಗಡಿ ದಾಟಿದ್ದರು.

Leave a Reply

Your email address will not be published.