ವಿಜಯಪುರ : ರಸ್ತೆಗೆ ಉರುಳಿದ ಆಯಿಲ್ ಟ್ಯಾಂಕರ್ – ಪೆಟ್ರೋಲ್ ತುಂಬಿಕೊಂಡು ಹೋಗುತ್ತಿರುವ ಜನ

ವಿಜಯಪುರ : ವಿಜಯಪುರ – ಸಿಂದಗಿ ರಸ್ತೆಯ ಮಧ್ಯೆ ಪೆಟ್ರೋಲ್ ಟ್ಯಾಂಕರ್ ಉರುಳಿದೆ. ಸಿಂದಗಿ ರಸ್ತೆಯಲ್ಲಿರುವ ಕಲ್ಲಹಂಗರಗಿ ಸೇತುವೆ ಮೇಲೆ ಚಾಲಕನ ನಿಯಂತ್ರಣ ತಪ್ಪಿದ್ದರಿಂದಾಗಿ ಪೆಟ್ರೋಲ್ ಟ್ಯಾಂಕರ್ ಉರುಳಿ ಬಿದ್ದಿದೆ.

ಬಿದ್ದ ಟ್ಯಾಂಕರ್ ನಿಂದ ಅಪಾರ ಪ್ರಮಾಣದಲ್ಲಿ ಪೆಟ್ರೋಲ್ ಸೋರಿಕೆಯಾಗುತ್ತಿದೆ. ಸೋರಿಕೆಯಾಗುತ್ತಿರುವ ಪೆಟ್ರೋಲ್ ಅನ್ನು ಜನರು ತುಂಬಿಕೊಂಡು ಹೋಗುತ್ತಿದ್ದಾರೆ. ಪಾತ್ರೆ ಪಗಡೆ, ಕ್ಯಾನ್, ಬಾಟಲ್ ಗಳನ್ನು ತಂದು ಜನ ಪೆಟ್ರೋಲ್ ಒಯ್ಯುತ್ತಿದ್ದಾರೆ. ಸಿಂದಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Leave a Reply

Your email address will not be published.

Social Media Auto Publish Powered By : XYZScripts.com