ಧೂಳೆಬ್ಬಿಸುತ್ತಿದೆ ಕಿಚ್ಚನ ಭಾವಚಿತ್ರ : ಸುದೀಪ್​ ಹುಟ್ಟುಹಬ್ಬಕ್ಕೆ ಅಭಿಮಾನಿಯಿಂದ ಭರ್ಜರಿ ಗಿಫ್ಟ್​..! 

ಬೆಂಗಳೂರು : ಸೆಪ್ಟೆಂಬರ್​ 2ರಂದು ಕರುನಾಡ ಚಕ್ರವರ್ತಿ ಕಿಚ್ಚ ಸುದೀಪ್​ ಅವರ ಹುಟ್ಟುಹಬ್ಬದ ಪ್ರಯುಕ್ತ ಕಿಚ್ಚನ ಅಭಿಮಾನಿಗಳು ಭರ್ಜರಿ ಗಿಫ್ಟ್​ ಕೊಡಲು ತಯಾರಾಗುತ್ತಿದ್ದಾರೆ. ಹಾಗೆಯೇ ಅಭಿಮಾನಿಯೊಬ್ಬ ಕಿಚ್ಚಗಾಗಿ ಸ್ಪೇಷಲ್​ ಗಿಫ್ಟ್​ ರೆಡಿ ಮಾಡಿದ್ದು ಈ ಗಿಫ್ಟ್​ ನೋಡಿದ ಸುದೀಪ್​ ಫುಲ್​ ಖುಷ್​ ಆಗಿದ್ದಾರೆ. ಈಗ ಎಲ್ಲೆಡೆ ಈ ಫೋಟೋದೆ ಚರ್ಚೆಯಾಗಿದ್ದು, ಫುಲ್​ ವೈರಲ್​ ಆಗಿದೆ.

ಕಳೆದ ವರ್ಷ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದೇ ಇದ್ದ ಸುದೀಪ್​ ಈ ಭಾರಿ ಅಭಿಮಾನಿಗಳ ಒತ್ತಾಯದ ಮೇರೆಗೆ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಕಿಚ್ಚನ ಹುಟ್ಟುಹಬ್ಬವನ್ನು ಕಿಚ್ಚೋತ್ಸವ ಎಂದು ಆಚರಿಸುತ್ತಿದ್ದಾರೆ. ಇನ್ನು ಹೆಬ್ಬುಲಿಯ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಉಡುಗೊರೆ ಕೊಡಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ.

ಕಿಚ್ಚನ ಅಭಿಮಾನಿ ಅಜಯ್​ ಕುಮಾರ್ ಸುದೀಪ್​ ಚಿತ್ರವನ್ನು ಬಿಡಿಸಿ, ಅಭಿನಯ ಚಕ್ರವರ್ತಿಯ ಪಡೆದ ಪ್ರಶಸ್ತಿಗಳನ್ನು ಬರೆದು ಹುಟ್ಟುಹಬ್ಬದ ಉಡುಗೊರೆಯಾಗಿ ಕೊಟ್ಟಿದ್ದು, ಈ ಫೋಟೋವನ್ನು ನೋಡಿ ಕಿಚ್ಚ ಫುಲ್​ ಖುಷ್​ ಆಗಿ ತಮ್ಮ ಟ್ವೀಟರ್​ನಲ್ಲಿ ಅಭಿಮಾನಿಗೆ ‘much much love’ ಟ್ವೀಟ್​ ಮಾಡಿದ್ದಾರೆ. ಇನ್ನು ಈ ಫೋಟೋ ಸುದೀಪ್​ ಅಭಿಮಾನಿಗಳ ಡಿಪಿ, ಸ್ಟೇಟಸ್​ನಲ್ಲಿ ರಾರಜಿಸುತ್ತಿದ್ದು, ವೈರಲ್​ ಆಗಿದೆ. ನಾಳೆ ಕಿಚ್ಚನ ಹುಟ್ಟುಹಬ್ಬಕ್ಕೆ ಕೊಟ್ಟಿಗೊಬ್ಬ-3 ಚಿತ್ರದ ಟೀಸರ್​ ಕೂಡ ರಿಲೀಸ್​ ಆಗಲಿದೆ.

Leave a Reply

Your email address will not be published.

Social Media Auto Publish Powered By : XYZScripts.com