ಮುಂದಿನ ಚುನಾವಣೆಯಲ್ಲಿ ಸಿದ್ದರಾಮಯ್ಯನವರೇ CM ಆಗಲಿದ್ದಾರೆ : ಆರ್.ಶಂಕರ್

ಕೊಪ್ಪಳ : ಕೊಪ್ಪಳದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆರ್ ಶಂಕರ್ ಹೇಳಿಕೆ ನೀಡಿದ್ದಾರೆ. ‘ ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಇನ್ನು ವಯಸ್ಸು ಇದೆ. ಮುಂದಿನ ಚುನಾವಣೆಯಲ್ಲಿ ಸಿದ್ದರಾಮಯ್ಯನವರೇ ಸಿಎಂ ಆಗಲಿದ್ದಾರೆ. ಇದರಲ್ಲಿ ಯಾವುದೇ ಸಂಶಯವಿಲ್ಲ ‘ ಎಂದಿದ್ದಾರೆ.

‘ ಸಿಎಂ ಬದಲಾವಣೆಯಾಗುವುದರ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ. ಬದಲಾವಣೆ ಇದ್ರೆ ನನ್ನ ಗಮನಕ್ಕೆ ಬರುತ್ತೆ. ನಿನ್ನೆ ಸಮನ್ವಯ ಸಮಿತಿಯಲ್ಲಿ ಬದಲಾವಣೆ ವಿಚಾರ ಪ್ರಸ್ತಾಪ ಆಗಿಲ್ಲ. ಇದರ ಬಗ್ಗೆ ಚರ್ಚೆ ಮಾಡೋ‌ ಅವಶ್ಯಕತೆ ಇಲ್ಲ ‘ ಎಂದರು.

‘ ಸಿಎಂ ಬದಲಾವಣೆ ಆಗೋ ಸಂದರ್ಭದಲ್ಲಿ ಯಾರಿಗೂ ಬೆಂಬಲ ಕೊಡಬೇಕು ಅನ್ನೊದನ್ನು ಯೋಚನೆ ಮಾಡ್ತೀನಿ. ಆದ್ರೆ ಇದೀಗ ಬದಲಾವಣೆ ಆಗೋ ವಿಚಾರವೇ ಇಲ್ಲ ‘ ಎಂದು ಆರ್ ಶಂಕರ್ ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com