ಮಂಡ್ಯ : ಮತದಾನ ಮಾಡಲು ಬಾರದ ರಮ್ಯ – ಮಾಜಿ ಸಂಸದೆ ವಿರುದ್ಧ ಚಳುವಳಿಗೆ ನಿರ್ಧಾರ

ಮಂಡ್ಯ : ಮಾಜಿ ಸಂಸದೆ ಹಾಗೂ ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯ ಮತದಾನ ಮಾಡಲು ಬರಲಿಲ್ಲ. ನಗರ ಸಭೆ 11ನೇ ವಾರ್ಡ್ ನಲ್ಲಿರುವ 36ನೇ ಮತಗಟ್ಟೆಯಲ್ಲಿ ಅವರಿಗೆ ಮತದಾನದ ಹಕ್ಕು ಇತ್ತು. ಆದರೆ ರಮ್ಯಾ ನಮ್ಮ ಹಕ್ಕು ಚಲಾವಣೆಗೆ ಬರದೇ ಕಾಂಗ್ರೆಸ್ ಕಾರ್ಯಕರ್ತರಲ್ಲಿ ನಿರಾಸೆ ಮೂಡಿಸಿದರು.

ಸಂಜೆ ಐದು ಗಂಟೆ ವರೆಗೂ ರಮ್ಯ ಬರುತ್ತಾರೆ ಎಂದು ಕಾಯುತ್ತಿದ್ದ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಮಾಧ್ಯಮದವರಿಗೆ ನಿರಾಸೆಯಾಯಿತು. ಮತದಾನ ಮಾಡದವರಿಗೆ ಮತ ಹಾಕುವುದಿಲ್ಲ ಎಂಬ ವಿನೂತನ ಚಳುವಳಿ ಮಾಡಲು ಮಂಡ್ಯ ನಾಗರಿಕರು ನಿರ್ಧಾರ ಮಾಡಿದ್ದಾರೆ.
ರಮ್ಯಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ನಾಗರಿಕರು ವಿಧಾನಸಭಾ ಚುನಾವಣೆ ಹಾಗೂ ನಗರಸಭೆ ಚುನಾವಣೆಯಲ್ಲಿ ಮತದಾನ ಮಾಡಲು ಬಾರದಿರುವ ಮಾಜಿ ಸಂಸದೆ ರಮ್ಯಾ ವಿರುದ್ಧ ಚಳಿ ಮಾಡಲು ನಿರ್ಧಾರ ಮಾಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com