ರಾಹುಲ್ ಗಾಂಧಿ ಚೀನಾ, ಪಾಕಿಸ್ತಾನದ ಏಜೆಂಟ್ ಇದ್ದಂತೆ : ಶಾಸಕ ಯತ್ನಾಳ್

ವಿಜಯಪುರ : ‘ ರಾಹುಲf ಗಾಂಧಿ ಚೀನಾದ ಏಜೆಂಟ್, ಪಾಕಿಸ್ತಾನದ ಏಜೆಂಟ್ ಇದ್ದಂತೆ. ಕಾಂಗ್ರೆಸ್ಸಿಗೆ ಮತ ಹಾಕಿದರೆ ವಿದೇಶಿಗರಿಗೆ ಮತ ಹಾಕಿದಂತೆ ‘ ಎಂದು ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿಕೆ ನೀಡಿದ್ದಾರೆ.

‘ಹಿಂದಿನ ಮತ್ತು ಮುಂದಿನ ಸಿಎಂ ಎಂದು ಯಡ್ಯೂರಪ್ಪ ಅವರನ್ನು ಸಂಬೊಧಿಸಿದ ಯತ್ನಾಳ ‘ ಯಡ್ಯೂರಪ್ಪ ಕೆಲವೇ ದಿನಗಳಲ್ಲಿ ಆಗುವುದು ಗ್ಯಾರಂಟಿ, ಕಾಂಗ್ರೆಸ್ಸಿನವರಿಗೆ ನರೇಂದ್ರ ಮೋದಿಯವರ ಭಯ ಕಾಡುತ್ತಿದೆ. ಎಲ್ಲ ಪಕ್ಷಗಳಿಗೆ ಪ್ರಧಾನಿ ಭಯ ಕಾಡುತ್ತಿದೆ. ಈ ಹಿನ್ನೆಲೆ ಎಲ್ಲರೂ ಒಂದುಗೂಡುತ್ತಿದ್ದಾರೆ ‘ ಎಂದಿದ್ದಾರೆ.

‘ ಪಾಕಿಸ್ತಾನ, ಚೀನಾಕ್ಕೂ ಮೋದಿ ಭಯವಿದೆ. ರಾಹುಲ ಗಾಂಧಿ ಚೀನಾದ ಏಜೆಂಟ್, ಪಾಕಿಸ್ತಾನದ ಏಜೆಂಟ್. ಈಗ ಅವರು ಮಾನಸ ಸರೋವರಕ್ಕೆ ಹೊರಟಿದ್ದಾರೆ ‘ ಎಂದು ಯಡ್ಯೂರಪ್ಪ ಸಮ್ಮುಖದಲ್ಲಿ ಯತ್ನಾಳ ಹೇಳಿಕೆ ನೀಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com