ಖರ್ಗೆ ಆರೋಪ ಶುದ್ಧ ಸುಳ್ಳು, ಪ್ರತಿಪಕ್ಷದ ನಾಯಕರು ಜವಾಬ್ದಾರಿಯಿಂದ ಹೇಳಿಕೆ ನೀಡೋದನ್ನು ಕಲಿರಿ : ಬಿಎಸ್​ವೈ

ಕಲಬುರಗಿ : ಸಂಸದ ಮಲ್ಲಿಕಾರ್ಜುನ ಖರ್ಗೆ ಅವರು ಸ್ಟಂಟ್ ಮಾಡೋದನ್ನು ನಿಲ್ಲಿಸಲಿ, ತರಾತುರಿಯಲ್ಲಿ ವಿಮಾನದಲ್ಲಿ ಟ್ರೈಲ್ಯಾಂಡ್ ಮಾಡಿದ್ದು ಯಾಕೆ? ಎಂದು ಮಲ್ಲಿಕಾರ್ಜುನ್​ ಖರ್ಗೆ ವಿರುದ್ದ  ಮಾಜಿ ಸಿಎಂ ಬಿಎಸ್​ವೈ ವಾಗ್ದಾಳಿ ನಡೆಸಿದ್ರು.

ಕಲಬುರಗಿಯಲ್ಲಿ ಮಾತನಾಡಿದ ಮಾಜಿ ಸಿಎಂ ಬಿಎಸ್ ವೈ, ‘ಜನರನ್ನು ಓಲೈಸಲು ಖರ್ಗೆ ಅವರು ವಿಮಾನ ನಿಲ್ದಾಣದ ಕಾಮಗಾರಿ ತರಾತುರಿಯಲ್ಲಿ ಟ್ರೈಲ್ಯಾಂಡ್ ಮಾಡಿದ್ದಾರೆ,  ಕಲಬುರ್ಗಿ ವಿಮಾನ ನಿಲ್ದಾಣವನ್ನು ಕೇಂದ್ರ ಸರಕಾರ ಉಡಾನ್ ಯೋಜನೆಯಲ್ಲಿ ಸೇರಿಸುತ್ತಿಲ್ಲ ಎನ್ನುವ ಖರ್ಗೆ ಆರೋಪ ಶುದ್ದ ಸುಳ್ಳು, ಖರ್ಗೆ ಅವರು ಹಿರಿಯರು,  ಪ್ರತಿಪಕ್ಷದ ನಾಯಕರು ಜವಾಬ್ದಾರಿಯಿಂದ ಹೇಳಿಕೆ ನೀಡೋದನ್ನು ಕಲಿಯಲಿ’ ಎಂದು ಬಿಎಸ್​ ವೈ ಖರ್ಗೆ ವಿರುದ್ಧ ಕಿಡಿಕಾರಿದ್ದಾರೆ.

‘ಇನ್ನು ವಿಮಾನ ನಿಲ್ದಾಣ ಸೆಕ್ಷನ್ ಮಾಡಿದ್ದು ಬಿಎಸ್ ವೈ ಎನ್ನೋದನ್ನು ಖರ್ಗೆ ಮರೆತಿದ್ದಾರೆ, ಬರೀ ಚುನಾವಣೆಗಾಗಿ ಹೀಗೆಲ್ಲಾ ಮಾಡುತ್ತಿರುವ ಖರ್ಗೆಗೆ ಈ ಬಾರಿ ಜನ ತಕ್ಕ ಪಾಠ ಕಲಿಸಲಿದ್ದಾರೆ, ವಿಮಾನ ನಿಲ್ದಾಣದ ಕಾಮಗಾರಿ ನಾನೂ ವಿಜಿಟ್ ಮಾಡಿದ್ದೇನೆ. ಅಲ್ಲಿ ಪೂರ್ಣಪ್ರಮಾಣದ ಕಾಮಗಾರಿ ಆಗಿಲ್ಲ, ಆದರೂ ಟ್ರೈಲ್ಯಾಂಡಿಂಗ್ ಮಾಡಿ ಉಡಾನ್ ಉಡಾನ್ ಅಂದ್ರೆ ಹೇಗೆ ?’ ಎಂದು ಖರ್ಗೆಗೆ ಬಿಎಸ್​ವೈ  ಪ್ರಶ್ನೆ ಮಾಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com