ಕ್ರಾಂತಿಕಾರಿ, ಜೈನ ರಾಷ್ಟ್ರಸಂತ ಮುನಿ ತರುಣ್​ ಸಾಗರ್ ವಿಧಿವಶ…!

ದೆಹಲಿ : ಕ್ರಾಂತಿಕಾರಿ, ಜೈನ ರಾಷ್ಟ್ರಸಂತ ಮುನಿ ತರುಣ್​ ಸಾಗರ್​ ಮಹಾರಾಜರು ಇಂದು ಬೆಳಿಗ್ಗೆ 3. 18 ಕ್ಕೆ ದೆಹಲಿಯ ರಾಧೇಪುರಿ ಜೈನ್​ ಮಂದಿರದಲ್ಲಿ ಭಕ್ತರ ಮಧ್ಯೆ ಕೊನೆಯುಸಿರೆಳೆದರು.

ಜೈನ ಮುನಿಗಳೂ ಜೀವನದ ಅಂತಿಮ ಕ್ಷಣಗಳಲ್ಲಿ ಕೈಗೊಳ್ಳವ ಸಲ್ಲೇಖನ ವೃತವನ್ನು ತರುಣ್ ಸಾಗರ್​ ಮುನಿ​​ ಕೈಗೊಂಡಿದ್ರು. ದಿನಕ್ಕೆ ಒಂದು ದಿನ ಆಹ ಸೇವಿಸುವ ಜೈನಮುನಿಗಳು ಜೀವನದ ಅಂತಿಮ ಘಟ್ಟದಲ್ಲಿ ಆ ಒಂದು ಹೊತ್ತ  ಆಹಾರ ಸೇವಿಸದೇ ಸಲ್ಲೇಖನ ವೃತ ಆಚರಿಸಿದ್ರು, ಇದರಿಂದ ಅವರು 15ದಿನಗಳ ಹಿಂದೆಯೇ ಆಸ್ಪತ್ರೆಗೆ ದಾಖಲಾಗಿದ್ದರು, ಆದರೆ ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ಇಂದು ಜೈನ್​ ಮಂದಿರದಲ್ಲಿ  ತರುಣ್​ ಸಾಗರ್​ ಮುನಿ ಇಹಲೋಕ ತ್ಯಜಿಸಿದ್ದಾರೆ.

ಜೈನ್ ಮುನಿ ತರುಣ್ ಸಾಗರ್ ಮಹಾರಾಜ್

ಜೈನ್​ ಮುನಿ ತರುಣ ಸಾಗರ ಅವರ ಮೊದಲ ಹೆಸರು ಪವನ್​ ಕುಮಾರ್​, ಇವರು ಮಧ್ಯಪ್ರದೇಶದ ದಹೋಹ್​ ಜಿಲ್ಲೆಯಲ್ಲಿ ಜೂನ್​ 26 1967ರಲ್ಲಿ ಜನಿಸಿದ್ದರು. ಕಡವೆ ಪ್ರವಚನಗಳ ಮೂಲಕ ಇಡಿ ರಾಷ್ಟ್ರದ ಗಮನ ಸೆಳೆದು ಜೈನ ಮತ್ತು ಜೈನೇತರ ಸಮಾಜದಲ್ಲಿ ತಮ್ಮದೇ ಆದ ವಿಶೇಷ ಸ್ಥಾನ ಮಾನ ಹೊಂದಿದ್ರು. ಮಧ್ಯಪ್ರದೇಶ, ರಾಜಸ್ಥಾನ, ಗುಜರಾತ ರಾಜ್ಯಗಳ ವಿಧಾನಸಭೆ ಅಧಿವೇಶನದಲ್ಲಿ ಪ್ರವಚನ ನೀಡಿದ್ದರು.

tarun sagar ji ಗೆ ಚಿತ್ರದ ಫಲಿತಾಂಶ

ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ  ಅವರು ಕಾಮಾಲೆ ಮತ್ತು ಇತರ ಸಮಸ್ಯೆಗಳಿಗೂ ಗುರಿಯಾಗಿದ್ದರು. ಆರೋಗ್ಯ ಗಂಭೀರ ಸ್ವರೂಪಕ್ಕೆ  ತಲುಪಿದರೂ ತರುಣ್‌ ಸಾಗರ್‌ ಅವರು ಆಸ್ಪತ್ರೆಗೆ ತೆರಳಲು ಒಪ್ಪಿರಲಿಲ್ಲ, ಆದರೆ ಮಂದಿರದ ಸಹಚರರ ಒತ್ತಾಯದಿಂದ, 15ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ರು.

tarun sagar ji ಗೆ ಚಿತ್ರದ ಫಲಿತಾಂಶ

ಇನ್ನು ಮುನಿಗಳ ಅಂತಿಮ ವಿಧಿ ವಿಧಾನಗಳು ಇಂದು ಸಂಜೆ ಉತ್ತರ ಪ್ರದೇಶದ ಮುರದ್​ನಗರದಲ್ಲಿರುವ ತರುಣ್​​ ಸಾಗರ್ ತೀರ್ಥದಲ್ಲಿ ನಡೆಯಲಿದೆ. ಮುನಿಗಳ ನಿಧನಕ್ಕೆ ರಾಜನಾಥ್​ ಸಿಂಗ್,​ ಪ್ರಧಾನಿ ನರೇಂದ್ರ ಮೋದಿ  ಟ್ವೀಟ್​ ಮೂಲಕ ಸಂತಾಪ ಸೂಚಿಸಿದ್ದಾರೆ.

 

 

 

 

Leave a Reply

Your email address will not be published.

Social Media Auto Publish Powered By : XYZScripts.com