ದೊಡ್ಡಬಳ್ಳಾಪುರ : ರಸ್ತೆ ಅಗಲೀಕರಣದಿಂದ ಮರಗಳ ಮಾರಣಹೋಮ – ಪರಿಸರ ಪ್ರೇಮಿಗಳ ಪ್ರತಿಭಟನೆ

ದೊಡ್ಡಬಳ್ಳಾಪುರ : ಹೆದ್ದಾರಿ ರಸ್ತೆ ಅಗಲೀಕರಣದಿಂದ ನಡೆಯುತ್ತಿರುವ ಮರಗಳ ಮರಣಹೋಮದ ವಿರುದ್ಧ ಪರಿಸರ ಪ್ರೇಮಿಗಳಿಂದ ವಿನೂತನ ರೀತಿಯಲ್ಲಿ ಪ್ರತಿಭಟಿಸಿದ್ದಾರೆ. ಕಡಿದ ಮರದ ಬುಡದಲ್ಲಿ ಕ್ಯಾಂಡಲ್ ಹಚ್ಚಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ನೆಲಮಂಗಲ -ದೊಡ್ಡಬಳ್ಳಾಪುರ ರಸ್ತೆ ಆಗಲೀಕರಣಕ್ಕೆ 68 ಬೃಹತ್ ಮರಗಳನ್ನು ಕಡಿಯಲಾಗಿದೆ. ವೈಜ್ಞಾನಿಕ ರೀತಿಯಲ್ಲಿ ಮರಗಳನ್ನ ಸ್ಥಳಾಂತರಿಸುವಂತೆ ಪರಿಸರ ಪ್ರೇಮಿಗಳು ಆಗ್ರಹಿಸಿದ್ದಾರೆ.

ಮರಗಳನ್ನ ಕಡಿಯದೆ ಟ್ರೀ ಟ್ರಾನ್ಸ್ ಪ್ಲಾಂಟರ್ ಮೂಲಕ ಮರಗಳ ಸ್ಥಳಾಂತರ ಸಾಧ್ಯವಿದ್ದು, ದೇಶದ ವಿವಿಧ ಭಾಗಗಳಲ್ಲಿ ಟ್ರೀ ಟ್ರಾನ್ಸ್ ಪ್ಲಾಂಟರ್ ಮೂಲಕ ಮರಗಳ ಸ್ಥಳಾಂತರಿಸಲಾಗಿದೆ. ಈಗಾಗಲೇ ರಸ್ತೆ ವಿಸ್ತರಣೆಗಾಗಿ 2500 ಮರಗಳನ್ನ ಕಡಿದಿರುವ ಗುತ್ತಿಗೆದಾರರ ವಿರುದ್ಧ ದೊಡ್ಡಬಳ್ಳಾಪುರದ ಯುವ ಸಂಚಲನ ಸದಸ್ಯರಿಂದ ಪ್ರತಿಭಟನೆ ನಡೆಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com