ದಾವಣಗೆರೆ : ನೆನ್ನೆ ಸುರಿದ ಮಳೆಗೆ ಮನೆಗಳು ಸಂಪೂರ್ಣ ಜಲಾವೃತ : ಜನಜೀವನ ಅಸ್ತವ್ಯಸ್ತ..!

ದಾವಣಗೆರೆ : ನೆನ್ನೆ ಸುರಿದ ಭಾರಿ ಮಳೆಗೆ  ದಾವಣಗೆರೆಯ ಭಾಷಾ ನಗರದ 6ನೇ ಕ್ರಾಸ್​​ನಲ್ಲಿರುವ ಮನೆಗಳು ಸಂಪೂರ್ಣ ಜಲಾವೃತಗೊಂಡಿದೆ. ಮನೆಗಳಿಗೆ ನೀರು ನುಗ್ಗಿ ಅಲ್ಲಿನ ನಿವಾಸಿಗಳೂ ನೀರನ್ನು ಹೊರಹಾಕಲು ಪರದಾಡುತ್ತಿದ್ದಾರೆ.

ದಾವಣಗೆರೆಯಲ್ಲಿ ಶುಕ್ರವಾರ ಭಾರಿ ಮಳೆಗೆ ಮನೆಯೊಳಗೆ ನೀರು ನುಗ್ಗಿದ್ದು, ನೀರು ಹೋಗಲು ಚರಂಡಿ ವ್ಯವಸ್ಥೆ ಸರಿಯಾಗಿ ಇಲ್ಲದ ಕಾರಣ, ಮಳೆ ನೀರನ್ನು ಮನೆಯಿಂದ ಹೊರಗೆ ಹಾಕಲು ಜನರು ಹರಸಾಹಸ ಪಡುತ್ತಿದ್ದಾರೆ.

ಇನ್ನು ಅಲ್ಲಿ ನೆಲೆಸಿರುವ ಹೆಚ್ಚು ಜನರು ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದು, ನೆನ್ನೆ ಸುರಿದ ಮಳೆಗೆ ಮನೆಯೊಳಗೆ ಏಕಾಏಕಿ ಮನೆಗೆ ನೀರು ನುಗ್ಗಿದ್ದು, ಮನೆಯಲ್ಲಿರುವ ಗೃಹೊಪಯೋಗಿ  ವಸ್ತುಗಳು ಸಂಪೂರ್ಣ ಜಲಾವೃತಗೊಂಡಿದ್ದು, ಮನೆಗಳೇ ಚರಂಡಿಯಾಗಿ ಮಾರ್ಪಟ್ಟಿದೆ, ಇದರಿಂದ ಮಾರಕ ರೋಗ ಸಂಭವಿಸುವುದು ಎಂದು ಜನರಲ್ಲಿ ಆತಂಕ  ಶುರುವಾಗಿದೆ.

 

 

One thought on “ದಾವಣಗೆರೆ : ನೆನ್ನೆ ಸುರಿದ ಮಳೆಗೆ ಮನೆಗಳು ಸಂಪೂರ್ಣ ಜಲಾವೃತ : ಜನಜೀವನ ಅಸ್ತವ್ಯಸ್ತ..!

Leave a Reply

Your email address will not be published.

Social Media Auto Publish Powered By : XYZScripts.com