Asian Games 2018 : ಬಾಕ್ಸಿಂಗ್ : ಭಾರತದ ಅಮಿತ್ ಪಂಘಲ್ ಗೆ ಚಿನ್ನದ ಪದಕ

ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಕ್ರೀಡಾಕೂಟದ 14ನೇ ದಿನ ಭಾರತಕ್ಕೆ ಮತ್ತೊಂದು ಚಿನ್ನದ ಪದಕ ಒಲಿದಿದೆ. ಶುಕ್ರವಾರ ನಡೆದ ಪುರುಷರ 49 ಕೆ.ಜಿ ವಿಭಾಗದ ಬಾಕ್ಸಿಂಗ್ ಫೈನಲ್ ನಲ್ಲಿ ಭಾರತದ ಅಮಿತ್ ಪಂಘಲ್ ಸ್ವರ್ಣ ಪದಕವನ್ನು ಜಯಿಸಿದ್ದಾರೆ.

ಫೈನಲ್ ನಲ್ಲಿ ಪ್ರಬಲ ಹೋರಾಟ ನಡೆಸಿದ ಅಮಿತ್ ಪಂಘಲ್, 2016ರ ನಡೆದ ರಿಯೋ ಒಲಿಂಪಿಕ್ ಕ್ರೀಡಾಕೂಟದ ಚಿನ್ನದ ಪದಕ ವಿಜೇತ ಉಜ್ಬೆಕಿಸ್ತಾನದ ಹಸನ್ಬಾಯ್ ದುಸಾಮಾಟೋವ್ ಅವರನ್ನು 3-2 ರಿಂದ ಮಣಿಸಿದರು. ಸೆಮಿಫೈನಲ್ ನಲ್ಲಿ ಅಮಿತ್ ಪಂಘಲ್, ಫಿಲಿಪೀನ್ಸ್ ನ ಪಾಲಮ್ ಕಾರ್ಲೊ ಅವರನ್ನು 3-2 ರಿಂದ ಸೋಲಿಸಿ ಫೈನಲ್ ಪ್ರವೇಶಿಸಿದ್ದರು.

ಇದರೊಂದಿಗೆ ಪ್ರಸಕ್ತ ಕ್ರೀಡಾಕೂಟದಲ್ಲಿ ಭಾರತ ಗೆದ್ದಿರುವ ಪದಕಗಳ ಸಂಖ್ಯೆ ಒಟ್ಟು 66 ಆಗಿದ್ದು, 14 ಬಂಗಾರ, 23 ಬೆಳ್ಳಿ ಹಾಗೂ 29 ಕಂಚಿನ ಪದಕಗಳು ಸೇರಿವೆ.

Leave a Reply

Your email address will not be published.