ತುಮಕೂರು : ಮದಲೂರು ಕೆರೆಗೆ ನೀರು ಹರಿಸಲು ಒತ್ತಾಯಿಸಿ JDS ಶಾಸಕರ ಅಹೋರಾತ್ರಿ ಧರಣಿ

ತುಮಕೂರು : ಮದಲೂರು ಕೆರೆ ಸೇರಿ ಇನ್ನಿತರ ಕೆರೆಗೆ ನೀರು ಹರಿಸಲು ಒತ್ತಾಯಿಸಿ ಸರ್ಕಾರದ ವಿರುದ್ದ ಜೆಡಿಎಸ್ ಶಾಸಕರು ಆಹೋರಾತ್ರಿ ಧರಣಿ ನಡೆಸಿದ್ದಾರೆ. ಶಿರಾ ಕ್ಷೇತ್ರದ ಜೆಡಿಎಸ್ ಶಾಸಕ ಸತ್ಯನಾರಾಯಣ್ ರಿಂದ ಧರಣಿ ನಡೆದಿದ್ದ, ಶಿರಾ ತಾಲೂಕಿನ ಎಲ್ಲಾ ಕೆರೆ ತುಂಬಿಸಲು ಒತ್ತಾಯಪಡಿಸಿದ್ದಾರೆ. ಸಿ‌.ಎಂ.ವಿರುದ್ದ ಸ್ವಪಕ್ಷೀಯ ಶಾಸಕರಿಂದ ಹೋರಾಟ ಶುರುವಾಗಿದ್ದು, ಬೆಂಬಲಿಗರೊಂದಿಗೆ ಶಿರಾ ನಗರದ ಪಂಪ್ ಹೌಸ್ ಬಳಿ ಧರಣಿ ನಡೆಸಲಾಗಿದೆ.

ಹೇಮಾವತಿ ನಾಲೆ ಮೂಲಕ ನೀರು ಹರಿಸಲು ಶಾಸಕರ ಒತ್ತಡ ತಂತ್ರ ಈಗಾಗಲೇ ರೈತ ಸಮೂಹ ರಕ್ತದ ಮೂಲಕ ಸಿ.ಎಂ.ಪತ್ರ ಬರೆದು ಚಳುವಳಿ ಆರಂಭಿಸಿದ್ದಾರೆ. ಹಾಸನದ ಹೇಮಾವತಿ ನಾಲೆಯಿಂದ ತಾಲೂಕಿಗೆ ನೀರು ತರಲು ಅವಿರತ ಯತ್ನ ನಡೆದಿದೆ.

ಜೆಡಿಎಸ್ ನಾಯಕರ ಆಕ್ಷೇಪಣೆಯಿಂದ ಇದುವರೆಗೂ ನೀರು ಹರಿಸಲಾಗಿಲ್ಲ.  ಕ್ಷೇತ್ರದ ಜನ,ರೈತರ ಹೋರಾಟ ತೀವ್ರಗೊಳ್ಳುವ ಮುನ್ನವೇ ಶಾಸಕರು ಎಚ್ಚೆತ್ತಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com