Asian Games : 4×400 ಮೀ. ರಿಲೇ : ಭಾರತದ ವನಿತೆಯರಿಗೆ ಚಿನ್ನ – ಪುರುಷರ ತಂಡಕ್ಕೆ ಬೆಳ್ಳಿ

ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಕ್ರೀಡಾಕೂಟದಲ್ಲಿ ರಿಲೇ ಓಟದ ಸ್ಪರ್ಧೆಯಲ್ಲಿ ಭಾರತಕ್ಕೆ ಎರಡು ಪದಕಗಳು ಲಭಿಸಿವೆ. ಗುರುವಾರ ನಡೆದ 4×400 ಮೀಟರ್ ರಿಲೇ ಫೈನಲ್ ನಲ್ಲಿ ಭಾರತದ ಮಹಿಳೆಯರ ತಂಡ ಬಂಗಾರದ ಪದಕವನ್ನು ಜಯಿಸಿದೆ.

ಹಿಮಾ ದಾಸ್, ಎಮ್.ಆರ್ ಪೂವಮ್ಮ, ಸರಿತಾ ಬೆನ್ ಗಾಯಕ್ವಾಡ್, ವಿಸ್ಮಯ ವೆಲ್ಲುವ ಕೊರೊತ್ ಒಳಗೊಂಡಿದ್ದ ಭಾರತದ ಮಹಿಳೆಯರ ತಂಡ 3 ನಿಮಿಷ 28.72 ಸೆಕೆಂಡುಗಳಲ್ಲಿ ಓಟವನ್ನು ಪೂರ್ಣಗೊಳಿಸಿತು.

Image result for relay Asian games india men's team silver

ಗುರುವಾರ ನಡೆದ 4×400 ಮೀಟರ್ ರಿಲೇ ಸ್ಪರ್ಧೆಯಲ್ಲಿ ಭಾರತದ ಪುರುಷರ ತಂಡ ಬೆಳ್ಳಿ ಪದಕವನ್ನು ಗೆದ್ದುಕೊಂಡಿದೆ. ಕುನ್ಹು ಮೊಹಮ್ಮದ್, ಧರುನ್ ಅಯ್ಯಸಾಮಿ, ಮೊಹಮ್ಮದ್ ಅನಸ್, ಅರೊಕಿಯಾ ರಾಜೀವ್ ಅವರನ್ನೊಳಗೊಂಡಿದ್ದ ಭಾರತ ತಂಡ 3 ನಿಮಿಷ 01.85 ಸೆಕೆಂಡುಗಳಲ್ಲಿ ಓಟವನ್ನು ಪೂರ್ಣಗೊಳಿಸಿತು.

Leave a Reply

Your email address will not be published.

Social Media Auto Publish Powered By : XYZScripts.com