ಸಿದ್ದರಾಮಯ್ಯ ವಿರುದ್ಧ ಕುಮಾರಸ್ವಾಮಿ ಎಐಸಿಸಿಗೆ ಕಂಪ್ಲೇಂಟ್ ಮಾಡಿದ್ದಾರೆ : ಕೆ.ಎಸ್ ಈಶ್ವರಪ್ಪ

ಶಿವಮೊಗ್ಗ : ಶಾಸಕ ಕೆ.ಎಸ್.ಈಶ್ವರಪ್ಪ ಮತದಾನದ ಬಳಿಕ ಹೇಳಿಕೆ ನೀಡಿದ್ದಾರೆ. ‘ ಕರ್ನಾಟಕ ರಾಜ್ಯದಲ್ಲಿ ೩ ಕಡೆ ಮಹಾನಗರ ಪಾಲಿಕೆ 105 ಕಡೆ ಸ್ಥಳಿಯ ಚುನಾವಣೆ ನಡೆಯುತ್ತಿದೆ. ವಿಧಾನಸಭೆಯಲ್ಲಿ ಬಿಜೆಪಿ 104 ಸ್ಥಾನ ಪಡೆದಿದೆ. ಕಾಂಗ್ರೆಸ್ ಜೆಡಿಎಸ್ ನ್ನು ಜನ ತಿರಸ್ಕರಿಸಿದ್ದಾರೆ. ಸಿದ್ದರಾಮಯ್ಯನಂಥ ಘಟಾನುಘಟಿಯನ್ನ ಜನರು ತಿರಸ್ಕರಿಸಿದ್ದಾರೆ. ಕಾಂಗ್ರೆಸ್ ಜೆಡಿಎಸ್ ನ್ನು ಜನ ದೂರಸರಿಸುತ್ತಾರೆ…ಬಿಜೆಪಿ ಅಧಿಕಾರಕ್ಕೆ ಬರುತ್ತೆ. ಬಿಜೆಪಿ ಹುಲಿಯಿದ್ದಂತೆ ‘ ಎಂದಿದ್ದಾರೆ.

‘ ಸಿದ್ದರಾಮಯ್ಯ ವಿರುದ್ಧ ಎಐಸಿಸಿಗೆ ಕುಮಾರಸ್ವಾಮಿ ಕಂಪ್ಲೇಂಟ್ ಮಾಡಿದ್ದಾರೆ. ಕುಮಾರಸ್ವಾಮಿ ಕಂಪ್ಲೆಂಟ್ ಮಾಡಿದ್ರೂ ಕಾಂಗ್ರೆಸ್ನವರ್ಯಾರು ಬಾಯಿ ಬಿಡುತ್ತಿಲ್ಲ. ಕಾಂಗ್ರೆಸ್ ಜೆಡಿಎಸ್ ಮಧ್ಯೆ ಸಮನ್ವಯ ಇಲ್ಲದ ಸಮನ್ವಯ ಸಮಿತಿ ಇದು. ಇಂಥ ಸಮನ್ವಯ ಸಮಿತಿಯಿಂದ ರಾಜ್ಯದ ಜನತೆಗೆ ಏನೂ ಲಾಭ ಆಗಲ್ಲ. ಜೆಡಿಎಸ್ ಕಾಂಗ್ರೆಸ್ ಕಿತ್ತಾಟದಿಂದಲೇ ಸಮ್ಮಿಶ್ರ ಸರ್ಕಾರ ಬಿದ್ದುಹೋಗಲಿದೆ ‘ ಎಂದಿದ್ದಾರೆ.

ಫೋನ್ ಕದ್ದಾಲಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು ‘ ಕಳ್ಳನ ಮನಸು ಹುಳ್ಳುಹುಳ್ಳಂಗೆ ಅನ್ನೋದು ಕುಮಾರಸ್ವಾಮಿ ಬುದ್ಧಿ, ಕುಮಾರಸ್ಚಾಮಿಗೆ ಸರ್ಕಾರ ಬಿದ್ದುಹೋಗುತ್ತದೆ ಅನ್ನೋ ಭಯ. ಹಾಗಾಗಿ ಫೋನ್‌ಕದ್ದಾಲಿಕೆ ವಿಚಾರ ಬಿಡುತ್ತಿದ್ದಾರೆ. ಪ್ರಧಾನಿಗೆ ನೇರವಾಗಿ ಕುಮಾರಸ್ವಾಮಿ ಫೋನ್ ಕದ್ದಾಲಿಕೆ ಬಗ್ಗೆ ಪತ್ರ ಬರೆಯಲಿ. ರಾಜ್ಯ ಸರ್ಕಾರ ಫೋನ್ ಕದ್ದಾಲಿಕೆ ವಿಚಾದಕ್ಕೆ ಸಮಿತಿ‌ ರಚನೆ ಮಾಡಲಿ ‘ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಒತ್ತಾಯಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com