ಕೊಡಗು : ಪ್ರಕೃತಿ ಮುನಿದು ಪ್ರವಾಹದಲ್ಲಿ ಮನೆ ಕೊಚ್ಚಿ ಹೋದರೂ ಈಡೇರಿತು ಮದುವೆ..!

ಕೊಡಗು : ಪ್ರವಾಹದ ಆರ್ಭಟಕ್ಕೆ ತುತ್ತಾಗಿರುವ ಕೊಡಗಿನಲ್ಲಿ ಪ್ರಕೃತಿ ಮುನಿದಿರುವ ಸಂದರ್ಭದಲ್ಲಿ ಮದುವೆಯೊಂದು ನಡೆದಿದೆ. ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಹಟ್ಟಿಹೊಳೆಯ ಪದ್ಮಿನಿ ಹಾಗೂ ಉಮೇಶ್ ದಂಪತಿಯ ಪುತ್ರಿ ಕುಸುಮಾ ಮದುವೆ ನೆರವೇರಿದೆ.

ಭಾರೀ ಮಳೆಯಿಂದಾಗಿ ಉಂಟಾಗಿದ್ದ ಭೀಕರ ಪ್ರವಾಹದಲ್ಲಿ ನವವಧು ಕುಸುಮಾ ಅವರ ಮನೆ ಹಟ್ಟಿಹೊಳೆಯಲ್ಲಿ ಕೊಚ್ಚಿಹೋಗಿತ್ತು. ಮದುವೆಗೆ ಖರೀದಿಸಿದ್ದ ಚಿನ್ನಾಭರಣಗಳೂ ಕೂಡ ಮನೆ ಜೊತೆ ಕೊಚ್ಚಿ ಹೋಗಿದ್ದವು. ಮೊದಲೇ ನಿಗದಿಯಾದ ಮುಹೂರ್ತದಲ್ಲಿ ಪೋಷಕರು ಸಾಲ ಮಾಡಿ ಮದುವೆಯನ್ನು ನೆರವೇರಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com