ಸ್ಥಳೀಯ ಸಂಸ್ಥೆ ಚುನಾವಣೆ : ಮತದಾನ ಪ್ರಕ್ರಿಯೆ ಆರಂಭ – ಬಿಗಿ ಪೋಲೀಸ್ ಬಂದೋಬಸ್ತ್

ತುಮಕೂರು : ಸ್ಥಳೀಯ ಸಂಸ್ಥೆ ಚುನಾವಣೆ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಿಗ್ಗೆಯಿಂದ ಮತದಾನ ಪ್ರಕ್ರಿಯೆ ಆರಂಭಗೊಂಡಿದೆ. ಬೆಳಗ್ಗೆ 7 ರಿಂದ ಮತದಾನ ಪ್ರಕ್ರಿಯೆ ಶುರುವಾಗಿದ್ದು, ತುಮಕೂರು ಜಿಲ್ಲೆಯ 5 ಸ್ಥಳೀಯ ಸಂಸ್ಥೆಗಳಿಗೆ ಇಂದು‌ ಮತದಾನ ನಡೆಯುತ್ತಿದೆ.

1 ನಗರಸಭೆ, 2 ಪುರಸಭೆ ಮತ್ತು 2 ಪಟ್ಟಣ ಪಂಚಾಯ್ತಿ ಗಳಲ್ಲಿ ಚುನಾಚಣೆ ನಡೆಯುತ್ತಿದೆ ಕೊರಟಗೆರೆ ಪಟ್ಟಣಪಂಚಾಯ್ತಿ, ಗುಬ್ಬಿ ಪಟ್ಟಣಪಂಚಾಯ್ತಿ, ಮಧುಗಿರಿ ಪುರಸಭೆ, ಚಿಕ್ಕನಾಯಕನಹಳ್ಳಿ ಪುರಸಭೆ ಮತ್ತು ತುಮಕೂರು ಮಹಾನಗರ ಪಾಲಿಕೆಗೆ ಸ್ಥಳೀಯ ಚುನಾವಣೆ ನಡೆಯಲಿದೆ. ಮತದಾನಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆಯನ್ನು ಮಾಡಿಕೊಂಡಿದ್ದು, ಮತಕೇಂದ್ರಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ಹಾವೇರಿಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮತದಾನ ಆರಂಭಗೊಂಡಿದ್ದು, ತಮ್ಮ ನೆಚ್ಚಿನ ನಾಯಕರನ್ನು ಆಯ್ಕೆ ಮಾಡಲು ಮತದಾರರು ಮತಕೇದ್ರಕ್ಕೆ ಆಗಮಿಸುತ್ತಿದ್ದಾರೆ. ಹಾವೇರಿ ಜಿಲ್ಲೆಯ 5 ಸ್ಥಳೀಯ ಸಂಸ್ಥೆಗೆ ಚುನಾವಣೆ ನಡೆಯಲಿದೆ. ಹಾವೇರಿ, ರಾಣೇಬೆನ್ನೂರು ನಗರಸಭೆ ಹಾನಗಲ್ ಸವಣೂರು ಪುರಸಭೆ ಹಾಗೂ ಹಿರೆಕೇರೂರ ಪಟ್ಟಣ ಪಂಚಾಯತಿಗೆ ನಡೆಯಲಿದೆ. ಒಟ್ಟು 136 ಸ್ಥಾನಕ್ಕೆ ಮತದಾನ ನಡೆಯುತ್ತಿದ್ದು, ಮತದಾನಕ್ಕಾಗಿ ಸಕಲ ಸಿದ್ದತೆ ಮಾಡಲಾಗಿದೆ.

ಒಟ್ಟು 208 ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆ ಜರುಗುತ್ತಿದ್ದು, ಕಣದಲ್ಲಿ ಒಟ್ಟು 481 ಅಭ್ಯರ್ಥಿಗಳಿದ್ದಾರೆ. 65 ಸೂಕ್ಷ್ಮ 25 ಅತಿಸೂಕ್ಷ್ಮ ಮತಗಟ್ಟೆಗಳಿದ್ದು, 224 ಇವಿಎಂ ಮಿಶನ್ ಗಳನ್ನು ಬಳಸಿಕೊಳ್ಳಲಾಗುತ್ತಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬೀಗಿ ಪೋಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ದಾವಣಗೆರೆ : ಇಂದು ಸ್ಥಳೀಯ ಸಂಸ್ಥೆ ಚುನಾವಣೆ ಹಿನ್ನೆಲೆಯಲ್ಲಿ ಬೆಳಗ್ಗೆ 7 ಗಂಟೆಗೆ ಮತದಾನ ಪ್ರಕ್ರಿಯೆ ಆರಂಭವಾಗಿದೆ. ದಾವಣಗೆರೆ ಜಿಲ್ಲೆಯ 3 ಸ್ಥಳೀಯ ಸಂಸ್ಥೆಗಳಿಗೆ ಇಂದು‌ ಮತದಾನ ನಡೆಯುತ್ತಿದೆ. 1 ಪುರಸಭೆ ಮತ್ತು 2 ಪಟ್ಟಣ ಪಂಚಾಯ್ತಿ ಗಳಲ್ಲಿ ಚುನಾಚಣೆ ಇದ್ದು, ಜಗಳೂರು ಪಟ್ಟಣಪಂಚಾಯ್ತಿ, ಹೊನ್ನಾಳಿ ಪಟ್ಟಣಪಂಚಾಯ್ತಿ ಮತ್ತು ಚನ್ನಗಿರಿ ಪುರಸಭೆ ಯ ಮತದಾನ ನಡೆಯತ್ತಿದೆ. ಮತದಾನಕ್ಕೆ ಸಕಲ ಸಿದ್ದತೆ ಮಾಡಿಕೊಂಡಿರುವ ಜಿಲ್ಲಾಡಳಿತ ಮತಕೇಂದ್ರಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದೆ.

Leave a Reply

Your email address will not be published.

Social Media Auto Publish Powered By : XYZScripts.com