Cricket : ಚೇತೇಶ್ವರ ಪೂಜಾರಾ ಅಜೇಯ ಶತಕ : ಮೊದಲ ಇನ್ನಿಂಗ್ಸ್ ನಲ್ಲಿ ಭಾರತಕ್ಕೆ ಅಲ್ಪ ಮುನ್ನಡೆ

ಸೌತ್ ಹ್ಯಾಂಪ್ಟನ್ ನ ರೋಸ್ ಬೌಲ್ ನಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಭಾರತ ಮೊದಲ ಇನ್ನಿಂಗ್ಸ್ ನಲ್ಲಿ ಅಲ್ಪ ಮುನ್ನಡೆ ಗಳಿಸಿದೆ. ಶುಕ್ರವಾರ ನಡೆದ ಎರಡನೇ ದಿನದಾಟದಲ್ಲಿ ಭಾರತ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 273 ಕ್ಕೆ ಆಲೌಟ್ ಆಗಿದೆ. ಇದರೊಂದಿಗೆ ಭಾರತ ಮೊದಲ ಇನ್ನಿಂಗ್ಸ್ ನಲ್ಲಿ 27 ರನ್ ಮುನ್ನಡೆ ಸಾಧಿಸಿತು.

ಅಜೇಯ ಶತಕ ಬಾರಿಸಿದ ಚೇತೇಶ್ವರ ಪೂಜಾರಾ 132 ರನ್ ಗಳಿಸಿ ತಂಡಕ್ಕೆ ಆಸರೆಯಾದರು. 257 ಎಸೆತಗಳನ್ನು ಎದುರಿಸಿದ ಪೂಜಾರಾ 16 ಬೌಂಡರಿಗಳನ್ನು ಬಾರಿಸಿದರು. ನಾಯಕ ವಿರಾಟ್ ಕೊಹ್ಲಿ 46 ರನ್ ಗಳಿಸಿದರು.

ಭಾರತ 227 ಕ್ಕೆ 9 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆಗ ಚೇತೇಶ್ವರ ಪೂಜಾರಾ ಹಾಗೂ ಜಸ್ಪ್ರೀತ್ ಬುಮ್ರಾ 10ನೇ ವಿಕೆಟ್ ಗೆ 46 ರನ್ ಜೊತೆಯಾಟವಾಡಿ ಮುನ್ನಡೆ ಸಾಧಿಸಲು ಕಾರಣವಾದರು. ಇಂಗ್ಲೆಂಡ್ ಪರವಾಗಿ ಮೋಯಿನ್ ಅಲಿ 5 ಹಾಗೂ ಸ್ಟುವರ್ಟ್ ಬ್ರಾಡ್ 3 ವಿಕೆಟ್ ಪಡೆದರು.

ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದು, 2ನೇ ದಿನದಾಟದ ಅಂತ್ಯಕ್ಕೆ ಯಾವುದೇ ವಿಕೆಟ್ ನಷ್ಟವಿಲ್ಲದೇ 6 ರನ್ ಗಳಿಸಿದೆ. ಅಲಿಸ್ಟರ್ ಕುಕ್ (2*) ಕೀಟನ್ ಜೆನ್ನಿಂಗ್ಸ್ (4*) ನಾಟೌಟ್ ಆಗುಳಿದಿದ್ದು ಕ್ರೀಸ್ ನಲ್ಲಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com