ಟೆಸ್ಟ್ ಕ್ರಿಕೆಟ್‍ನಲ್ಲಿ ಇಶಾಂತ್ ಶರ್ಮಾಗೆ 250 ವಿಕೆಟ್ : ಟೀಮ್ ಇಂಡಿಯಾ ವೇಗಿಯ ಸಾಧನೆ

ಟೀಮ್ ಇಂಡಿಯಾದ ವೇಗದ ಬೌಲರ್ ಇಶಾಂತ್ ಶರ್ಮಾ ಟೆಸ್ಟ್ ಕ್ರಿಕೆಟ್ ನಲ್ಲಿ 250 ವಿಕೆಟ್ ಪಡೆದಿದ್ದಾರೆ. ಸೌತ್ ಹ್ಯಾಂಪ್ಟನ್ ನ ರೋಸಬೌಲ್ ಮೈದಾನದಲ್ಲಿ ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವೆ ಗುರುವಾರ ಆರಂಭಗೊಂಡ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಇಶಾಂತ್ ಈ ಸಾಧನೆ ಮಾಡಿದ್ದಾರೆ.

ವೃತ್ತಿ ಜೀವನದ 86ನೇ ಟೆಸ್ಟ್ ಪಂದ್ಯವನ್ನಾಡುತ್ತಿರುವ ಇಶಾಂತ್ ಶರ್ಮಾ ಇಂಗ್ಲೆಂಡ್ ನಾಯಕ ಜೋ ರೂಟ್ ಅವರನ್ನು ಎಲ್ ಬಿ ಡಬ್ಲ್ಯೂ ಬಲೆಗೆ ಬೀಳಿಸುವ ಮೂಲಕ 250ನೇ ವಿಕೆಟ್ ಪಡೆದರು.

ಟೆಸ್ಟ್ ಕ್ರಿಕೆಟ್ ನಲ್ಲಿ 250 ಕ್ಕೂ ಹೆಚ್ಚು ವಿಕೆಟ್ ಪಡೆದ ಮೂರನೇ ಭಾರತೀಯ ವೇಗದ ಬೌಲರ್ ಎನಿಸಿದ್ದಾರೆ. ಇದಕ್ಕೂ ಮುನ್ನ ಮಾಜಿ ಆಲ್ರೌಂಡರ್ ಕಪಿಲ್ ದೇವ್ (434 ವಿಕೆಟ್) ಎಡಗೈ ವೇಗಿ ಜಹೀರ್ ಖಾನ್ (311 ವಿಕೆಟ್) ಈ ಸಾಧನೆ ಮಾಡಿದ ಭಾರತೀಯ ವೇಗದ ಬೌಲರ್ ಗಳಾಗಿದ್ದಾರೆ.

Leave a Reply

Your email address will not be published.