ಕೊಪ್ಪಳ : ಸ್ಟಾರ್ ಥಿಯೇಟರ್ ಗೆ ‘ಅಯೋಗ್ಯ’ ಚಿತ್ರ ತಂಡ – ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ

ಕೊಪ್ಪಳ : ಅಯೋಗ್ಯ ಸಿನಿಮಾ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಕೊಪ್ಪಳದ ಸ್ಟಾರ್ ಥಿಯೇಟರ್ ಗೆ ಅಯೋಗ್ಯ ಸಿನಿಮಾ ಟೀಮ್ ಆಗಮಿಸಿದೆ. ಚಿತ್ರ ನಟ ನಿನಾಸಂ ಸತೀಶ್ ಹಾಗೂ ನಿರ್ದೇಶಕ ಆಗಮಿಸಿದ್ದಾರೆ.

‘ ಇಂಡಸ್ಟ್ರಿಯಲ್ಲಿ ಯಾರು ನಂಬರ್ ಒನ್, ನಂಬರ್ ಟೂ ಇಲ್ಲ. ಇಲ್ಲಿ ಡಾ.ರಾಜ್ ಕುಮಾರ್ ನಂಬರ್ ವನ್, ಅವರ ನಂತ್ರ ವಿಷ್ಣುವರ್ಧನ್, ಈಗ ಅಂಬರೀಶ್ ನಂಬರ್ ವನ್, ಇಲ್ಲಿ ಯಾರು ಹೀರೋ ಅಲ್ಲ, ಸಿನಿಮಾ ಹೀರೋ, ಜನ ಹೀರೋ ‘ ಎಂದು ಸತೀಶ್ ಹೇಳಿದ್ದಾರೆ.

ರಾಜ್ಯಾದ್ಯಂತ ಅಯೋಗ್ಯ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್ ದೊರೆತಿದೆ. ಥಿಯೇಟರ್ ಮಾಲೀಕರು ಹಾಗೂ ಅಭಿಮಾನಿಗಳಿಂದ ಸತೀಶ್ ಗೆ ಸನ್ಮಾನ ಮಾಡಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com