ಫೇಸ್​ಬುಕ್​ ಹುಚ್ಚಾಟ : ‘ನಾಳೆ ನನ್ನ ಸಾವು’ ಎಂದು ಪೋಸ್ಟ್​ ಮಾಡಿದ ಯುವಕ…!

ಚಿಕ್ಕಬಳ್ಳಾಪುರ : ಫೇಸ್​ ಬುಕ್​ನಿಂದ ಹಲವಾರು ಜನ  ಫೇಮಸ್​ ಆಗಿದ್ದು ನಾವು ನೋಡಿದ್ದೇವೆ, ಹಾಗೆಯೇ ಲವ್​ ಮಾಡಿ ಮದುವೆ ಆದವರನ್ನು ನೋಡಿದ್ದೇವೆ, ಆದರೆ ಇಲ್ಲೊಬ್ಬ ಫೇಸ್​ಬುಕ್​ನಲ್ಲಿ ‘ನಾಳೆ ನನ್ನ ಸಾವು’ ಎಂದು ಪೋಸ್ಟ್ ಮಾಡಿ ಪೇಚಿಗೆ ಸಿಲುಕಿದ್ದಾನೆ. ​

ಫೇಸ್​ ಬುಕ್​ನಿಂದ ಇತ್ತಿಚೆಗೆ ಅನುಕೂಲಕ್ಕಿಂತ ಅನಾನುಕೂಲಗಳೇ ಹೆಚ್ಚಾಗಿ ನಡೆಯುತ್ತಿದೆ. ಹಾಗೆಯೇ ​ಚಿಕ್ಕಬಳ್ಳಾಪುರದ ಯುವಕ ಜಯಚಂದ್ರ ರೆಡ್ಡಿ ಫೇಸ್​ಬುಕ್​ ನಲ್ಲಿ ನಾಳೆ ನನ್ನ ಸಾವು ಎಂದು ಪೋಸ್ಟ್​ ಹಾಕಿದ್ದ, ಇದನ್ನು ನೋಡಿ ಗಾಬರಿಗೊಂಡ ಸ್ನೇಹಿತರು, ಸಂಬಂಧಿಕರು ಯುವಕನಿಗೆ ಕರೆ ಮಾಡಿ ವಿಚಾರಿಸಿದ್ದಾರೆ.

ಇನ್ನು ಜಯಚಂದ್ರ ರೆಡ್ಡಿಯ ಸ್ಟೇಟಸ್​ ಬಗ್ಗೆ  ಪೊಲೀಸರು ಯುವಕನ ಹತ್ತಿರ ವಿಚಾರಿಸಿ, ಸಖತ್​ ಕ್ಲಾಸ್​ ತೆಗೆದುಕೊಂಡಿದ್ದಾರೆ. ಯುವಕನ ಹತ್ತಿರ ಪೊಲೀಸರು ವಿಚಾರಿಸಿದಾಗ ಈ ರೀತಿ ಪೋಸ್ಟ್​ ಮಾಡಲು ಕಾರಣ ತಿಳಿಸಿದ ಯುವಕ  ‘ಸಂಬಂಧಿಕರು, ಸ್ನೇಹಿತರು ಎಷ್ಟು ಪ್ರೀತಿಸುತ್ತಾರೆ ಎಂದು ತಿಳಿಯಲು ಮಾಡಿದೆ’ ಎಂದು ಹೇಳಿದ್ದಾನೆ. ಈ ಘಟನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ  ಪೋಸ್ಟ್​ ಅನ್ನು ಯುವಕ  ಡಿಲೀಟ್​ ಮಾಡಿದ್ದಾನೆ.

Leave a Reply

Your email address will not be published.

Social Media Auto Publish Powered By : XYZScripts.com