ಶ್ರೀನಗರ : ಹಿಜ್ಬುಲ್ ಉಗ್ರ ಸಂಘಟನೆಯ ಕಮಾಂಡರ್ ಸಲಾಹುದ್ದೀನ್ ಪುತ್ರನ ಬಂಧನ..

ಹಿಜ್ಬುಲ್ ಮುಜಾಹಿದೀನ್ ಉಗ್ರ ಸಂಘಟನೆಯ ಕಮಾಂಡರ್ ಸೈಯದ್ ಸಲಾಹುದ್ದೀನ್ ಪುತ್ರನನ್ನು ಶ್ರೀನಗರದಲ್ಲಿ ರಾಷ್ಟ್ರೀಯ ತನಿಖಾ ದಳ (ಎನ್ ಐಎ) ಗುರುವಾರ ಬೆಳಿಗ್ಗೆ ಬಂಧಿಸಿದೆ. ಬಂಧನಕ್ಕೊಳಗಾಗಿರುವ ಸೈಯದ್ ಶಕೀಲ್ ಯೂಸುಫ್ ಮೇಲೆ 2011 ರಲ್ಲಿ ಉಗ್ರ ಸಂಘಟನೆಗೆ ಹಣದ ನೆರವು ನೀಡಿದ ಆರೋಪವಿದೆ. ಈತನನ್ನು ಶ್ರೀನಗರದ ರಾಮಬಾಘ್ ಪ್ರದೇಶದಲ್ಲಿ ದಾಳಿ ನಡೆಸಿ ವಶಕ್ಕೆ ಪಡೆಯಲಾಗಿದೆ.

‘ ಸೈಯದ್ ಶಕೀಲ್ ಯೂಸುಫ್ ಶೇರ್ ಎ ಕಾಶ್ಮೀರ್ ಮೆಡಿಕಲ್ ಕಾಲೇಜಿನ ಪ್ರತಿಷ್ಠಿತ ಸರಕಾರೀ ಆಸ್ಪತ್ರೆಯ ಪ್ರಯೋಗಾಲಯದಲ್ಲಿ ತಂತ್ರಜ್ಞನಾಗಿ ಕೆಲಸ ಮಾಡುತ್ತಿದ್ದ ‘ ಎಂದು ಪೋಲೀಸ್ ಅಧಿಕಾರಿ ತಿಳಿಸಿದ್ದಾರೆ. ಜಾಗತಿಕ ಭಯೋತ್ಪಾದಕನಾಗಿ ಗುರುತಿಸಿಕೊಂಡಿರುವ ತನ್ನ ತಂದೆ ಸಲಾಹುದ್ದೀನ್ ನಿಂದ ಈತ ಹಣ ಪಡೆಯುತ್ತಿದ್ದ ಎನ್ನಲಾಗಿದೆ.

ಪಾಕಿಸ್ತಾನದಿಂದ ದೆಹಲಿ ಮಾರ್ಗವಾಗಿ ಜಮ್ಮ ಕಾಶ್ಮೀರಕ್ಕೆ ಅಕ್ರಮವಾಗಿ ಹಣ ಸಾಗಿಸಿದ ಆರೋಪದ ಮೇಲೆ ಸೈಯದ್ ಶಕೀಲ್ ಯೂಸುಫ್ ಮೇಲೆ ಎನ್ ಐಎ 2011 ರಲ್ಲಿ ಪ್ರಕರಣ ದಾಖಲಿಸಿಕೊಂಡಿತ್ತು. ಈ ಹಣ ಕಾಶ್ಮೀರದಲ್ಲಿ ಉಗ್ರಕೃತ್ಯ ಹಾಗೂ ಪ್ರತ್ಯೇಕತಾವಾದಿ ಚಟುವಟಿಕೆಗಳಿಗೆ ಬಳಕೆಯಾಗಿತ್ತು ಎಂದು ಎನ್ ಐಎ ಹೇಳಿದೆ.

Leave a Reply

Your email address will not be published.

Social Media Auto Publish Powered By : XYZScripts.com