‘RSS ವಿಷ ಸಮಾನ, ಆಹ್ವಾನ ಸ್ವೀಕರಿಸಬೇಡಿ’ – ರಾಹುಲ್ ಗೆ ಕಾಂಗ್ರೆಸ್ ನಾಯಕರ ಸಲಹೆ

ರಾಜಧಾನಿ ನವದೆಹಲಿಯ ವಿಜ್ಞಾನ ಭವನದಲ್ಲಿ ಆಯೋಜಿತಗೊಂಡಿರುವ ಆರ್ ಎಸ್ ಎಸ್ ಕಾರ್ಯಕ್ರಮಕ್ಕೆ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಆಹ್ವಾನಿಸಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಆಹ್ವಾನವನ್ನು ‘ ಸ್ವೀಕರಿಸಬೇಡಿ, ಕಾರ್ಯಕ್ರಮಕ್ಕೆ ತೆರಳಬೇಡಿ ‘ ಎಂದು ಕಾಂಗ್ರೆಸ್ ನಾಯಕರು ರಾಹುಲ್ ಗಾಂಧಿಗೆ ಸಲಹೆ ನೀಡಿದ್ದಾರೆ.

‘ ಆರ್ ಎಸ್ ಎಸ್ ವಿಷ ಸಮಾನವಾಗಿದೆ. ಅದರ ಹತ್ತಿರ ಹೋದವರಿಗೆ ಹಾನಿ ಎದುರಾಗಲಿದೆ ‘ ಎಂದು ಎಚ್ಚರಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಆಂತರಿಕ ಸಭೆಯಲ್ಲಿ ವರಿಷ್ಟ ಮುಖಂಡರು ರಾಹುಲ್ ಗಾಂಧಿಗೆ ವಿಷ ಸಮಾನವಾಗಿರುವ ಆರ್ ಎಸ್ ಎಸ್ ನಿಂದ ದೂರವಿರುವಂತೆ ಸಲಹೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ರಾಷ್ಟ್ರೀಯ ಸ್ವಯಂ ಸೇವಕ ಸಂಘ ಈ ಹಿಂದೆ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರನ್ನು ನಾಗಪುರದಲ್ಲಿರುವ ಪ್ರಧಾನ ಕಾರ್ಯಾಲಯದ ಕಾರ್ಯಕ್ರಮಕ್ಕೆ ಆಮಂತ್ರಿಸಿತ್ತು.

Leave a Reply

Your email address will not be published.