‘ ಪ್ರಧಾನ ಮಂತ್ರಿಯಲ್ಲ ಮೋದಿ ಪ್ರಚಾರ ಮಂತ್ರಿ ‘ : AICC ಮಾಧ್ಯಮ ಸಂಚಾಲಕಿ ವಾಗ್ದಾಳಿ

ಹುಬ್ಬಳ್ಳಿಯಲ್ಲಿ ಎಐಸಿಸಿ ಮಾಧ್ಯಮ ಸಂಚಾಲಕಿ ಪ್ರಿಯಾಂಕ ಚತುರ್ವೇದಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ‘ ಪ್ರಧಾನ ಮಂತ್ರಿಯಲ್ಲ ಮೋದಿ, ಪ್ರಚಾರ ಮಂತ್ರಿ. ಪ್ರಚಾರಕ್ಕಾಗಿ ದೇಶದ ಜನರ ತೆರಿಗೆ ಹಣವನ್ನು ಮೋದಿ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ದೊಡ್ಡ ದೊಡ್ಡ ಉದ್ದಿಮೆಗಾರರಿಗೆ ಇವರ ಶ್ರೀ ರಕ್ಷೆ ಇದೆ. ಪ್ರತಿ ಚುನಾವಣೆಗೆ ಅವರೇ ಹಣ ತೊಡಗಿಸುತ್ತಾರೆ ‘ ಎಂದಿದ್ದಾರೆ.

‘ ವಿಮಾನ ಖರೀದಿಯಲ್ಲಿ 1 ಲಕ್ಷ 30 ಸಾವಿರ ಕೋಟಿ ಹಗರಣ ನಡೆದಿದೆ. ಕೇಂದ್ರ ಸರ್ಕಾರದ ಇದೊಂದು ದೊಡ್ಡ ಹಗರಣವಾಗಿದೆ. ರಕ್ಷಣಾ ಇಲಾಖೆಯಲ್ಲಿ ನಡೆದಿರುವ ಹಗರಣವಾಗಿದೆ. ಬಿಜೆಪಿ ಕೇಂದ್ರದಲ್ಲಿ ಆಡಳಿತ ಹಿಡಿದ ಮೇಲೆ ನಡೆದ ಹಗರಣ ಇದಾಗಿದೆ ‘ ಎಂದು ಆರೋಪಿಸಿದ್ದಾರೆ.

Image result for modi

‘ ವಿಮಾನಗಳ ಖರೀದಿಯಲ್ಲಿ ಭಾರಿ ಹಗರಣ ನಡೆದಿದೆ. ವಿಮಾನಗಳ ಕೊಳ್ಳುವ ಬೆಲೆ ಮೂರು ಪಟ್ಟು ಹೆಚ್ಚಿಸಿ 1 ಲಕ್ಷ 30 ಸಾವಿರ ಕೋಟಿ ಹಣವನ್ನು ಖಾಸಗಿಯವರಿಗೆ ಹಸ್ತಾಂತರ ಮಾಡಲಾಗಿದೆ. ರಫೇಲ್ ವಿಮಾನ ಖರೀದಿಯಲ್ಲೂ ಗೋಲಮಾಲ್ ನಡೆದಿದೆ. 526 ಕೋಟಿ ರೂಪಾಯಿಗಳಿಗೆ ಖರೀದಿಸುವ ಬದಲು 1670 ಕೋಟಿ ಹಣಕ್ಕೆ ಖರೀದಿಸಲಾಗಿದೆ ‘

‘ ಸಾರ್ವಜನಿಕರ ತೆರಿಗೆ ಹಣ 41,205 ಕೋಟಿ ನಷ್ಟವಾಗಿದೆ. ಯುಪಿಎ ಸರ್ಕಾರದ ಒಪ್ಪಂದ ಮುರಿದು ಮೋದಿ ಸರ್ಕಾರ ಫ್ರಾನ್ಸ್ ನೊಂದಿಗೆ ಹೊಸ ಒಪ್ಪಂದ ಮಾಡಿಕೊಂಡಿತು. ಪ್ರಧಾನಿ ಹಾಗೂ ರಕ್ಷಣಾ ಸಚಿವರು ಸುಳ್ಳು ಹೇಳುತ್ತಿದ್ದಾರೆ. 36 ರಫೇಲ್ ವಿಮಾನಗಳ ಖರೀದಿ ಕುರಿತು ಬಾಯಿ ಬಿಡುತ್ತಿಲ್ಲ. 41 ಸಾವಿರ ಕೋಟಿ ಹಣ ನೀಡಿ ಯುದ್ಧ ವಿಮಾನ ಖರೀದಿಸುವ ಅಗತ್ಯ ಏನಿತ್ತು. 126 ಯುದ್ಧ ವಿಮಾನಗಳ ಬದಲಾಗಿ 36 ವಿಮಾನ ಖರೀದಿಸಿದ್ದು ದೇಶಕ್ಕೆ ರಕ್ಷಣೆ ನೀಡುತ್ತದೆ ‘ ಎಂದಿದ್ದಾರೆ.

Image result for priyanka chaturvedi

‘ ಪ್ರಧಾನಿ ಮೋದಿ ವಿಮಾನ ಖರೀದಿ ಕುರಿತು ಬೆಲೆಯ ಬಗ್ಗೆ ಪ್ರಧಾನಿ ಏಕೆ ಮೌನ ಮುರಿಯುತ್ತಿಲ್ಲ. ಅನುಭವಿ ಸಂಸ್ಥೆ ಬಿಟ್ಟು ಅನಾನುಭವಿ ಸಂಸ್ಥೆಗೆ ಗುತ್ತಿಗೆ ಕೊಟ್ಟಿದ್ದು ಏಕೆ ‘ ಎಂದು ಪ್ರಶ್ನೆ ಮಾಡಿದ್ದಾರೆ.

‘ 70 ವರ್ಷಗಳ ಅನುಭವ ಇರುವ ಫ್ರಾನ್ಸ್ ಕಂಪನಿಗೆ ಏಕೆ ಗುತ್ತಿಗೆ ನೀಡಲಿಲ್ಲ. ಈ ಎಲ್ಲ ನಮ್ಮ ಪ್ರಶ್ನೆಗಳಿಗೆ ಪ್ರಧಾನಿ ಮೋದಿ ಹಾಗೂ ರಕ್ಷಣಾ ಸಚಿವೆ ನಿರ್ಮಲಾ ಸಿತಾರಾಮನ್ ಉತ್ತರ ನೀಡಬೇಕು ‘ ಎಂದು ಸವಾಲು ಹಾಕಿದ್ದಾರೆ.

‘ ಅಗತ್ಯವಾಗಿ ನಿರ್ವಹಿಸಬೇಕಾದ ಕ್ರಮಗಳನ್ನು ಕೇಂದ್ರ ಸರ್ಕಾರ ಕೈಗೊಂಡಿಲ್ಲ. ಪ್ರಧಾನಿ ಮೋದಿಯವರ ಭ್ರಷ್ಟಾಚಾರ ಮುಕ್ತ ಭಾರತ ಎಲ್ಲಿದೆ..? ಕೇಂದ್ರ ಸರ್ಕಾರ ಹಾಗೂ ಕೇಂದ್ರದ ಮಂತ್ರಿಗಳು ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ.

‘ ಭ್ರಷ್ಟಾಚಾರ ಮುಕ್ತ ಭಾರತ ಯಾವಾಗ ಆಗುತ್ತದೆ. ರಾಷ್ಟ್ರೀಯ ರಕ್ಷಣೆಯಲ್ಲಿ ಯಾವುದೇ ರಾಜಿಯಾಗಲು ನಾವು ಸಿದ್ದರಿಲ್ಲ. ಯುಪಿಎ ಸರ್ಕಾರದಲ್ಲಿ ಯಾವುದೇ ರೀತಿಯಲ್ಲಿ ರಾಷ್ಟ್ರದ ರಕ್ಷಣೆಗೆ ರಾಜಿಯಾಗುತ್ತಿರಲಿಲ್ಲ. ಆದರೆ ಇಂದಿನ ಪ್ರಧಾನಿ ಸೂಟು ಬೂಟುಗಳ ಪ್ರಧಾನಿಯಾಗಿದ್ದಾರೆ. ನೋಟ್ ಬ್ಯಾನ್ ಮೂಲಕ ದೇಶದ ಆರ್ಥಿಕತೆ ಸಂಪೂರ್ಣ ನೆಲಕಚ್ಚಿತು ‘ ಎಂದಿದ್ದಾರೆ.

Image result for modi

‘ ಪ್ರಧಾನಿ ಹಾಗೂ ಸಂಸತ್ತಿನಲ್ಲಿ ಸುಳ್ಳು ಹೇಳುವ ರಕ್ಷಣಾ ಸಚಿವರಿಂದ ದೇಶಕ್ಕೆ ರಕ್ಷಣೆ ಸಿಗುವುದಿಲ್ಲ. ಕೇವಲ 12 ದಿನಗಳಲ್ಲಿ ಅಸ್ತಿತ್ವಕ್ಕೆ ಬಂದ ಕಂಪನಿಗೆ ಗುತ್ತಿಗೆ ನೀಡಿದ್ದು ಎಷ್ಟು ಸರಿ..? ತಿನ್ನಲು ಬಿಡುವುದಿಲ್ಲ ನಾನು ತಿನ್ನುವುದಿಲ್ಲ ಎಂದು ದೇಶವನ್ನು ಕೊಳ್ಳೆ ಹೊಡೆಯುತ್ತಿದ್ದಾರೆ

‘ ಕೆಟ್ಟ ಶಬ್ದಗಳನ್ನು ಹೇಳುವ ಸಂಸದರಿಗೆ ಬಿಜೆಪಿಯಲ್ಲಿ ಗೌರವ ಸಿಗುತ್ತದೆ ‘ ಎಂದ ಅವರು ಪರೋಕ್ಷವಾಗಿ ಪ್ರಹ್ಲಾದ್ ಜೋಶಿ ಹಾಗೂ ಅನಂತಕುಮಾರ್ ಹೆಗಡೆಯವರಿಗೆ ಟಾಂಗ್ ನೀಡಿದ್ದಾರೆ.

ಮತ್ತೆ ಸಿಎಂ ಆಗ್ತಿನಿ ಎಂದು ಹೇಳಿರುವ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು ‘ ನಾವು ಒಂದಾಗಿದ್ದೇವೆ ಯಾವುದೇ ಬಿರುಕು ಇಲ್ಲ. ಜೆಡಿಎಸ್ ಹಾಗೂ ಕಾಂಗ್ರೆಸ್ ಒಂದಾಗಿ ಇರುತ್ತೇವೆ. ಕರ್ನಾಟಕದ ಜನರ ಅಭಿವೃದ್ದಿಗಾಗಿ ಒಟ್ಟಿಗೆ ಕೆಲಸ ಮಾಡುತ್ತೇವೆ. ರಾಜ್ಯ ಸರ್ಕಾರ ಚೆನ್ನಾಗಿ ಆಡಳಿತ ನಡೆಸುತ್ತಿದೆ. ಸುಳ್ಳು ಹೇಳುವ ಪಡೆ ಮೋದಿ ಸರ್ಕಾರದಲ್ಲಿ ಕೂಡಿದೆ ‘ ಎಂದಿದ್ದಾರೆ.

Leave a Reply

Your email address will not be published.