ಭಿನ್ನಧ್ವನಿಯನ್ನು ಹತ್ತಿಕ್ಕಲು ಹತ್ಯೆ ಮಾಡುವ ಕೆಲಸ ನಡೆದಿರುವುದು ಸರಿಯಲ್ಲ : ತೋಂಟದ ಶ್ರೀ

ಗದಗ : ‘ ಪ್ರಜಾಪ್ರಭುತ್ವದಲ್ಲಿ ಭಿನ್ನಮತಕ್ಕೆ ಬಹಳಷ್ಟು ಬೆಲೆ ಇದೆ. ಭಿನ್ನಮತವಿಲ್ಲದಿದ್ರೆ ಅದು ಪ್ರಜಾಪ್ರಭುತ್ವವೇ ಅಲ್ಲ. ನಂಬಿಕೆಗಳಿಗೆ ಭಿನ್ನವಾಗಿ ಮಾತನಾಡಿದ್ದಕ್ಕೆ ಚಿಂತಕ ಹತ್ಯೆಯಾಗಿವೆ ‘ ಎಂದು ಗದಗನಲ್ಲಿ ತೋಂಟದ ಸಿದ್ಧಲಿಂಗ ಶ್ರೀಗಳ ಹೇಳಿಕೆ ನೀಡಿದ್ದಾರೆ.

ಸಂಶೋಧಕ ಎಮ್.ಎಮ್.ಕಲಬುರ್ಗಿ ಹತ್ಯೆ ಹಿಂದಿನ ಶಕ್ತಿ ಬಹಿರಂಗಕ್ಕೆ ಆಗ್ರಹಿಸಿ ನಡೆದ ಪ್ರತಿಭಟನೆಯಲ್ಲಿ ಹೇಳಿಕೆ ನೀಡಿದ್ದಾರೆ. ‘ ನಾಲ್ಕು ಜನ ಈ ಚಿಂತಕರ ಹತ್ಯೆ ಭಾರತೀಯ ಸಂಸ್ಕೃತಿಗೆ ಶೋಭಿಸಲ್ಲ. ಭಿನ್ನಧ್ವನಿಯನ್ನು ಹತ್ತಿಕ್ಕಲು ಹತ್ಯೆ ಮಾಡುವ ಕೆಲಸ ನಡೆದಿರೋದು ಸರಿಯಲ್ಲ. ಹತ್ಯೆಕೋರರು ಹಾಗೂ ಅದಕ್ಕೆ ಬೆಂಬಲಿಸಿದ ಸಂಘಟನೆಗಳ ಶಕ್ತಿ ಬಹಿರಂಗವಾಗಬೇಕು ‘ ಎಂದಿದ್ದಾರೆ.

Leave a Reply

Your email address will not be published.