ಗದಗ : ಸಂಶೋಧಕ ಕಲಬುರ್ಗಿ ಹತ್ಯೆಗೆ 3 ವರ್ಷ : ಹಂತಕ ಶಕ್ತಿ ಬಹಿರಂಗಕ್ಕೆ ಆಗ್ರಹಿಸಿ ಪ್ರತಿಭಟನೆ

ಗದಗ : ಖ್ಯಾತ ಸಂಶೋಧಕ ಎಮ್.ಎಮ್ ಕಲಬುರಗಿ ಹತ್ಯೆಯಾಗಿ ಮೂರು ವರ್ಷಗಳು ಕಳೆದಿದ್ದು, ಹತ್ಯೆ ಹಿಂದಿರುವ ಹಂತಕ ಶಕ್ತಿಯ ಬಹಿರಂಗಕ್ಕೆ ಪ್ರಗತಿಪರರು ಪ್ರತಿಭಟನೆ ನಡೆಸಿದ್ದಾರೆ. ಗದಗ ನಗರದ ಗಾಂಧಿ ವೃತ್ತದಲ್ಲಿ ರಸ್ತೆ ತಡೆದು ಗೌರಿ ಲಂಕೇಶ್, ಡಾ.ಕಲಬುರ್ಗಿ, ದಾಭೋಲ್ಕರ್ ಹತ್ಯಾ ವಿರೋಧಿ ಹೋರಾಟ ಸಮಿತಿಯಿಂದ ಪ್ರತಿಭಟನೆ ನಡೆಸಲಾಗಿದೆ.

ಸುಳ್ಳು ಕೇಸ್ ಮೂಲಕ ವಿಚಾರವಾದಿಗಳ ಬಂಧನಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಲಾಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕುವ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಪ್ರತಿಭಟನೆಯಲ್ಲಿ ತೋಂಟದ ಸಿದ್ಧಲಿಂಗಶ್ರೀಗಳು ಸೇರಿ ವಿಚಾರವಾದಿಗಳು, ಚಿಂತಕರು, ಪ್ರಗತಿಪರ ಹೋರಾಟಗಾರರು ಭಾಗಿಯಾಗಿದ್ದರು.

Leave a Reply

Your email address will not be published.